ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ಪಾವತಿಸಬೇಕಾದ ಇಎಂಐಗಳನ್ನು ಅಂದಾಜು ಮಾಡಲು ಆನ್ಲೈನ್ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ಈಗಲೇ ಲೆಕ್ಕ ಹಾಕಿಹೋಮ್ ಲೋನ್: ಮೇಲ್ನೋಟ
ಬಜಾಜ್ ಹೌಸಿಂಗ್ ಫೈನಾನ್ಸ್‌ನ ಹೋಮ್ ಲೋನ್ ನಿಮ್ಮ ಸ್ವಂತ ಮನೆಯ ಗುರಿಯನ್ನು ಹಿಂದೆಂದಿಗಿಂತಲೂ ಸುಲಭವಾಗಿಸುತ್ತದೆ. ನಿಮ್ಮ ಅರ್ಹತೆಯ ಆಧಾರದ ಮೇಲೆ ನೀವು ₹15 ಕೋಟಿಯವರೆಗಿನ* ಹೋಮ್ ಲೋನ್ ಪಡೆಯಬಹುದು. ಸಂಬಳ ಪಡೆಯುವ ಅರ್ಜಿದಾರರಿಗೆ ನಾವು ವರ್ಷಕ್ಕೆ 7.25%* ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರಗಳನ್ನು ಒದಗಿಸುತ್ತೇವೆ. Rs.671/Lakh* ರಷ್ಟು ಕಡಿಮೆ EMI ಗಳು ಮತ್ತು 32 ವರ್ಷಗಳವರೆಗೆ ವಿಸ್ತರಿಸುವ ದೀರ್ಘ ಮರುಪಾವತಿ ಅವಧಿಯೊಂದಿಗೆ, ನೀವು ನಿಮ್ಮ ಸ್ವಂತ ವೇಗದಲ್ಲಿ ಲೋನನ್ನು ಮರುಪಾವತಿ ಮಾಡಬಹುದು.
ನಮ್ಮ ಹೌಸಿಂಗ್ ಲೋನ್‌ಗಳು ಇತರ ಅನೇಕ ಪ್ರಯೋಜನಗಳೊಂದಿಗೆ ಬರುತ್ತವೆ. ನೀವು ಆನ್ಲೈನಿನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಬಹುದು ಮತ್ತು ಕೇವಲ 48 ಗಂಟೆಗಳ ಒಳಗೆ ವಿತರಣೆಯನ್ನು ನಿರೀಕ್ಷಿಸಬಹುದು*. ನೀವು ಅಸ್ತಿತ್ವದಲ್ಲಿರುವ ಹೌಸಿಂಗ್ ಲೋನ್ ಹೊಂದಿದ್ದರೆ, ಕಡಿಮೆ ಬಡ್ಡಿ ದರ ಮತ್ತು ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಆನಂದಿಸಲು ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಮಾಡಬಹುದು. ಭಾರತದಲ್ಲಿ ಹೋಮ್ ಲೋನ್‌ನೊಂದಿಗೆ ಹಳೆಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ನೀವು ಹಲವಾರು ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯಬಹುದು.
ನಿಮ್ಮ ಮನೆ ಮಾಲೀಕತ್ವದ ಪ್ರಯಾಣಕ್ಕಾಗಿ ಬಜಾಜ್ ಹೌಸಿಂಗ್ ಫೈನಾನ್ಸ್ ಏಕೆ ಆಯ್ಕೆ ಮಾಡಬೇಕು?
ಮನೆ ಎಂಬುದು ಕೇವಲ ಖರೀದಿಗಿಂತ ಹೆಚ್ಚಿನ ವಿಷಯವಾಗಿದೆ. ಅದು ಸಣ್ಣ ದೈನಂದಿನ ಕ್ಷಣಗಳಲ್ಲಿ ಮತ್ತು ದೊಡ್ಡ ಮೈಲಿಗಲ್ಲುಗಳಲ್ಲಿ ಜೀವನವು ರೂಪುಗೊಳ್ಳುವ ಜಾಗವಾಗಿದೆ. ಮತ್ತು ಪ್ರತಿಯೊಬ್ಬರ ಮನೆ ಖರೀದಿ/ನಿರ್ಮಾಣದ ಪ್ರಯಾಣವೂ ಭಿನ್ನವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ; ಅದಕ್ಕಾಗಿಯೇ ನಾವು ನಿಮಗಾಗಿ ವಿಶೇಷ ಹೋಮ್ ಲೋನ್ ಅನ್ನು ಒದಗಿಸುತ್ತೇವೆ.
ನಿಮ್ಮ ಅಗತ್ಯಗಳಿಗೆ ಅನುಗುಣವಾದ ಪರಿಹಾರಗಳು, ತ್ವರಿತ ಅನುಮೋದನೆಗಳು ಮತ್ತು ವಿತರಣೆಗಳು ಮತ್ತು ಯಾವುದೇ ಸಮಯದಲ್ಲಿ ನಿಮ್ಮ ಲೋನ್‌ಗೆ ಸುಲಭ ಅಕ್ಸೆಸ್‌ನೊಂದಿಗೆ, ಪ್ರಕ್ರಿಯೆಯನ್ನು ಸರಳ ಮತ್ತು ಒತ್ತಡ-ಮುಕ್ತಗೊಳಿಸಲು ನಾವು ಸಹಾಯ ಮಾಡುತ್ತೇವೆ. ಆನ್‌ಲೈನ್ ಅಪ್ಲಿಕೇಶನ್ ಮತ್ತು ಡಾಕ್ಯುಮೆಂಟೇಶನ್‌ನಿಂದ ಲೋನ್ ಒಪ್ಪಂದಗಳ ಡಿಜಿಟಲ್ ಇ-ಸೈನಿಂಗ್‌ವರೆಗೆ ಮತ್ತು ನಮ್ಮ ಗ್ರಾಹಕ ಪೋರ್ಟಲ್ ಮತ್ತು ಆ್ಯಪ್ ಮೂಲಕ ಲೋನ್ ಮ್ಯಾನೇಜ್‌ಮೆಂಟ್‌ವರೆಗೆ ಪ್ರತಿ ಹಂತವನ್ನು ಸುಗಮ ಮತ್ತು ಸರಳವಾಗಿ ವಿನ್ಯಾಸಗೊಳಿಸಲಾಗಿದೆ.
ಏಕೆಂದರೆ ನಿಮ್ಮ ಮನೆಯ ವಿಷಯಕ್ಕೆ ಬಂದಾಗ, ಅದು ನಿಮ್ಮ ಇಚ್ಛೆಯಂತೆ ಇರಬೇಕು ಹಾಗೂ ಸರಿಯಾದ ಪಾಲುದಾರರು ಜೊತೆಗಿರಬೇಕು.
ಹೋಮ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು

ವಾರ್ಷಿಕ 7.25%* ಸ್ಪರ್ಧಾತ್ಮಕ ಬಡ್ಡಿ ದರ.
ಇಂದೇ ನಮ್ಮ ಆಕರ್ಷಕ ಹೌಸಿಂಗ್ ಲೋನ್ ಬಡ್ಡಿ ದರವನ್ನು ಪಡೆಯಿರಿ. ವರ್ಷಕ್ಕೆ 7.25%* ರಲ್ಲಿ, ಸಂಬಳ ಪಡೆಯುವ ಅರ್ಜಿದಾರರು ಲಕ್ಷಕ್ಕೆ ₹671 ರಷ್ಟು ಕಡಿಮೆ ಹೋಮ್ ಲೋನ್ EMI ಗಳಿಂದ ಪ್ರಯೋಜನ ಪಡೆಯಬಹುದು*.

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್
ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿರುವ ಸಾಲಗಾರರು ಬ್ಯಾಲೆನ್ಸ್ ಮೊತ್ತವನ್ನು ನಮಗೆ ಟ್ರಾನ್ಸ್‌ಫರ್ ಮಾಡುವ ಮೂಲಕ ನಮ್ಮ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಸಂಬಳ ಪಡೆಯುವ ಅರ್ಜಿದಾರರಿಗೆ ವರ್ಷಕ್ಕೆ 7.30%* ರಿಂದ ಆರಂಭವಾಗುವ ಬಡ್ಡಿ ದರಗಳು.

32 ವರ್ಷಗಳ ಮರುಪಾವತಿ ಅವಧಿ
ನಿಮ್ಮ ಇಎಂಐ ಮರುಪಾವತಿಯನ್ನು ಉತ್ತಮವಾಗಿ ನಿರ್ವಹಿಸಲು ದೀರ್ಘ ಅವಧಿಯನ್ನು ಆಯ್ಕೆ ಮಾಡಿ. 32 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ ಮತ್ತು ಆರಾಮದಾಯಕವಾಗಿ ನಿಮ್ಮ ಲೋನ್ ಮೊತ್ತವನ್ನು ಮರುಪಾವತಿಸಿ.

ಸಲೀಸಾದ ಅಪ್ಲಿಕೇಶನ್
ನಮ್ಮ ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ನಿಜವಾದ ತೊಂದರೆ ರಹಿತ ಅನುಭವವನ್ನು ಆನಂದಿಸಿ. ಬ್ರಾಂಚ್ ಭೇಟಿಗಳನ್ನು ಸ್ಕಿಪ್ ಮಾಡಿ ಮತ್ತು ನಮ್ಮ ಮನೆಬಾಗಿಲಿನ ಡಾಕ್ಯುಮೆಂಟ್ ಪಿಕಪ್ ಸೇವೆಯನ್ನು ಆಯ್ಕೆ ಮಾಡಿ.

ಬಾಹ್ಯ ಬೆಂಚ್‌ಮಾರ್ಕ್ ಲಿಂಕ್ ಆದ ಲೋನ್‌ಗಳು
ನೀವು ನಿಮ್ಮ ಹೌಸಿಂಗ್ ಲೋನ್ ಬಡ್ಡಿ ದರವನ್ನು ರೆಪೋ ದರ ದಂತಹ ಬಾಹ್ಯ ಮಾನದಂಡಕ್ಕೆ ಲಿಂಕ್ ಮಾಡಬಹುದು.

9,800+ ಅನುಮೋದಿತ ಯೋಜನೆಗಳು
ನಮ್ಮ 9,800+ ಅನುಮೋದಿತ ಯೋಜನೆಗಳ ಪಟ್ಟಿಯಿಂದ ಆಸ್ತಿಯನ್ನು ಆಯ್ಕೆ ಮಾಡಿ ಮತ್ತು ತ್ವರಿತ ಮತ್ತು ತೊಂದರೆ ರಹಿತ ಪ್ರಕ್ರಿಯೆಯೊಂದಿಗೆ ಅತ್ಯುತ್ತಮ ಸಾಲ ಪಡೆಯುವ ನಿಯಮಗಳನ್ನು ಆನಂದಿಸಿ.

ರೂ. 15 ಕೋಟಿಯ ಲೋನ್ ಮೊತ್ತ*
ನಿಮ್ಮ ಕನಸಿನ ಮನೆಯನ್ನು ಖರೀದಿಸುವಾಗ ಮಂಜೂರಾತಿ ಮೊತ್ತವು ಸಮಸ್ಯೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಅರ್ಹತೆಯ ಆಧಾರದ ಮೇಲೆ ₹.15 ಕೋಟಿಯವರೆಗಿನ* ಗಣನೀಯ ಹೋಮ್ ಲೋನ್ ಪಡೆಯಿರಿ.

ರೂ. 1 ಕೋಟಿಯ ಟಾಪ್-ಅಪ್ ಲೋನ್*
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಜೊತೆಗೆ, ನೀವು ಕಡಿಮೆ ಬಡ್ಡಿ ದರಗಳ ಪ್ರಯೋಜನ ಪಡೆಯುತ್ತೀರಿ ಮತ್ತು ಅರ್ಹತೆಯ ಆಧಾರದ ಮೇಲೆ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಪಡೆಯುತ್ತೀರಿ.

48 ಗಂಟೆಗಳಲ್ಲಿ ವಿತರಣೆ*
ಹೋಮ್ ಲೋನ್ ಅರ್ಜಿದಾರರು ತಮ್ಮ ಅಪ್ಲಿಕೇಶನ್ ಮತ್ತು ಡಾಕ್ಯುಮೆಂಟೇಶನ್ ಪರಿಶೀಲನೆ ಅನುಮೋದನೆಯಾದ ನಂತರ 48 ಗಂಟೆಗಳ* ಒಳಗೆ ವಿತರಣೆಯನ್ನು ನಿರೀಕ್ಷಿಸಬಹುದು.

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು
ನೀವು ನಿರ್ಮಾಣದಲ್ಲಿರುವ ಆಸ್ತಿಗಾಗಿ ಭಾರತದಲ್ಲಿ ಹೋಮ್ ಲೋನ್ ತೆಗೆದುಕೊಂಡಿದ್ದರೆ, ನಮ್ಮ ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳೊಂದಿಗೆ ನೀವು ಆರಂಭದಲ್ಲಿ ನಿಮ್ಮ ಇಎಂಐಗಳ ಒಂದು ಭಾಗವನ್ನು ಮಾತ್ರ ಪಾವತಿಸಬಹುದು.

ಉತ್ತಮ ನಿರ್ಧಾರ-ತೆಗೆದುಕೊಳ್ಳಲು ಆನ್ಲೈನ್ ಟೂಲ್‌ಗಳು
ಸಾಲಗಾರರು ಮತ್ತು ಅರ್ಜಿದಾರರಿಗೆ ಸಹಾಯ ಮಾಡಲು, ನಾವು ಇಎಂಐ ಕ್ಯಾಲ್ಕುಲೇಟರ್ ಮತ್ತು ಅರ್ಹತಾ ಕ್ಯಾಲ್ಕುಲೇಟರ್‌ನಂತಹ ಸಾಧನಗಳನ್ನು ಒದಗಿಸುತ್ತೇವೆ. ನಿಮ್ಮ ಹೋಮ್ ಲೋನ್ ಮರುಪಾವತಿಗಳು ಮತ್ತು ಅಪ್ಲಿಕೇಶನ್‌ಗಳನ್ನು ಯೋಜಿಸಲು ಅವುಗಳನ್ನು ಬಳಸಿ..

3-ವರ್ಷದ ದರದ ಖಾತರಿ
ನಿಮ್ಮ ಹೋಮ್ ಲೋನ್‌ನ ಮೊದಲ ಮೂರು ವರ್ಷಗಳಿಗೆ ಸ್ಪರ್ಧಾತ್ಮಕ ಫಿಕ್ಸೆಡ್ ಬಡ್ಡಿ ದರವನ್ನು ಆನಂದಿಸಿ. ಈ ಅವಧಿಯ ನಂತರ, ಲೋನ್ ಫ್ಲೋಟಿಂಗ್ ಬಡ್ಡಿಗೆ ಬದಲಾಗುವ ಮೂಲಕ ನಿಮಗೆ ನಿಶ್ಚಿತತೆ ಮತ್ತು ದೀರ್ಘಾವಧಿಯ ಫ್ಲೆಕ್ಸಿಬಿಲಿಟಿ ಎರಡನ್ನೂ ನೀಡುತ್ತದೆ.

ಆನ್‌ಲೈನ್ ಅಕೌಂಟ್ ನಿರ್ವಹಣೆ
ತಡೆರಹಿತ ಸಾಲ ಪಡೆಯುವ ಅನುಭವಕ್ಕಾಗಿ, ನಾವು ಲೋನ್ ವಿವರಗಳು ಮತ್ತು ಸಂಬಂಧಿತ ಡಾಕ್ಯುಮೆಂಟ್‌ಗಳಿಗೆ ರಿಯಲ್-ಟೈಮ್ ಅಕ್ಸೆಸ್ ಒದಗಿಸುತ್ತೇವೆ ಬಜಾಜ್ ಹೌಸಿಂಗ್ ಫೈನಾನ್ಸ್ ಗ್ರಾಹಕ ಪೋರ್ಟಲ್‌ನಲ್ಲಿ ಈ ವಿವರಗಳನ್ನು ಪರಿಶೀಲಿಸಿ..
ಹೋಮ್ ಲೋನ್ ಇಎಂಐ ಲೆಕ್ಕ ಹಾಕಿ
ಮರುಪಾವತಿ ಶೆಡ್ಯೂಲ್
ಎಲ್ಲಾ ಕ್ಯಾಲ್ಕುಲೇಟರ್‌ಗಳು
ಹೋಮ್ ಲೋನ್ ಅರ್ಹತೆಯ ಮಾನದಂಡ
ಹೋಮ್ ಲೋನ್ ಅರ್ಹತಾ ಮಾನದಂಡವನ್ನು ಪರಿಶೀಲಿಸುವುದು ಮುಖ್ಯ, ಆದ್ದರಿಂದ ನೀವು ಹೋಮ್ ಲೋನ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಅರ್ಜಿದಾರರ ಉದ್ಯೋಗ ಪ್ರಕಾರದ ಆಧಾರದ ಮೇಲೆ ನಮ್ಮ ಮಾನದಂಡಗಳು ಬದಲಾಗುತ್ತವೆ. ಭಾರತದಲ್ಲಿ ಆನ್ಲೈನ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಆಸಕ್ತಿ ಹೊಂದಿದ್ದೀರಾ? ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ:
| ಅರ್ಹತಾ ಮಾನದಂಡಗಳು | ವೇತನದಾರ | ಸ್ವಯಂ ಉದ್ಯೋಗಿ | ಸ್ವಯಂ ಉದ್ಯೋಗಿ ವೃತ್ತಿಪರರು |
|---|---|---|---|
| ರಾಷ್ಟ್ರೀಯತೆ | ಭಾರತೀಯ (ಎನ್‌ಆರ್‌ಐಗಳನ್ನು ಒಳಗೊಂಡು) | ಭಾರತೀಯ (ನಿವಾಸಿ ಮಾತ್ರ) | ಭಾರತೀಯ (ನಿವಾಸಿ ಮಾತ್ರ) |
| ಉದ್ಯೋಗ | ಸಾರ್ವಜನಿಕ ಅಥವಾ ಖಾಸಗಿ ವಲಯದ ಕಂಪನಿ ಅಥವಾ ಎಂಎನ್‌ಸಿಯಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವ | ಪ್ರಸ್ತುತ ಉದ್ಯಮದಲ್ಲಿ ಕನಿಷ್ಠ 3 ವರ್ಷಗಳ ಹಿನ್ನೆಲೆ | ಪ್ರಸ್ತುತ ಉದ್ಯಮದಲ್ಲಿ ಕನಿಷ್ಠ 3 ವರ್ಷಗಳ ಹಿನ್ನೆಲೆ |
| ವಯಸ್ಸು | 23 ರಿಂದ 67 ವರ್ಷಗಳು** | 25 ರಿಂದ 70 ವರ್ಷಗಳು** | 25 ರಿಂದ 70 ವರ್ಷಗಳು** |
**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿಯ ಪ್ರೊಫೈಲ್ ಆಧಾರದ ಮೇಲೆ ಗರಿಷ್ಠ ವಯಸ್ಸಿನ ಮಿತಿಯು ಬದಲಾಗಬಹುದು.
ನೀವು ಆನ್‌ಲೈನ್‌ನಲ್ಲಿ ಹೌಸಿಂಗ್ ಲೋನಿಗೆ ಅಪ್ಲೈ ಮಾಡುವ ಮೊದಲು, ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಲು ನಮ್ಮ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.
ಹೋಮ್ ಲೋನ್ ಡಾಕ್ಯುಮೆಂಟೇಶನ್
ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು, ನೀವು ಫಾರ್ಮ್‌ನಲ್ಲಿ ನಮೂದಿಸಿದ ವೈಯಕ್ತಿಕ, ಉದ್ಯೋಗ, ಆದಾಯ ಮತ್ತು ಹಣಕಾಸಿನ ಮಾಹಿತಿಗಾಗಿ ನೀವು ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ ನೀವು ನೀಡಬೇಕಾದ ಡಾಕ್ಯುಮೆಂಟ್‌ಗಳ ಚೆಕ್‌ಲಿಸ್ಟ್ ಈ ಕೆಳಗಿನಂತಿದೆ:
| ಕಡ್ಡಾಯ ಡಾಕ್ಯುಮೆಂಟ್‌ಗಳು | PAN ಕಾರ್ಡ್ ಅಥವಾ ಫಾರ್ಮ್ 97 |
| ಕೆವೈಸಿ ಡಾಕ್ಯುಮೆಂಟ್‌ಗಳು | ಇತ್ತೀಚಿನ ಫೋಟೋ, ವೋಟರ್ ID ಕಾರ್ಡ್, ಆಧಾರ್ ಕಾರ್ಡ್, ಮಾನ್ಯ ಪಾಸ್ಪೋರ್ಟ್, ಮಾನ್ಯ ಡ್ರೈವಿಂಗ್ ಲೈಸೆನ್ಸ್ |
| ಆದಾಯದ ಪುರಾವೆ | 3 ತಿಂಗಳ ಸಂಬಳದ ಸ್ಲಿಪ್‌ಗಳು (ಸಂಬಳ ಪಡೆಯುವ ಮತ್ತು ಸಂಬಳ ಪಡೆಯುವ ವೃತ್ತಿಪರ ಅರ್ಜಿದಾರರಿಗೆ), ಪಿ&ಎಲ್ ಸ್ಟೇಟ್ಮೆಂಟ್ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಐಟಿಆರ್ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಮತ್ತು ಕಳೆದ 6 ತಿಂಗಳ ನಿಮ್ಮ ಪ್ರೈಮರಿ ಅಕೌಂಟ್ ಸ್ಟೇಟ್ಮೆಂಟ್‌ಗಳು (ಎಲ್ಲಾ ಅರ್ಜಿದಾರರಿಗೆ) |
| ವ್ಯವಹಾರದ ಪುರಾವೆ | 3 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಬಿಸಿನೆಸ್ ವಿಂಟೇಜ್ ಪುರಾವೆ (ಸ್ವಯಂ ಉದ್ಯೋಗಿ ಮತ್ತು ವೃತ್ತಿಪರರಲ್ಲದ ಅರ್ಜಿದಾರರಿಗೆ) |
| ಶಿಕ್ಷಣ ಅರ್ಹತೆಗಳು | ಎಂಬಿಬಿಎಸ್ ಮತ್ತು ಅದಕ್ಕಿಂತ ಮೇಲ್ಪಟ್ಟ (ಸ್ವಯಂ ಉದ್ಯೋಗಿ ವೃತ್ತಿಪರರು- ಡಾಕ್ಟರ್‌ಗಳು) ಮತ್ತು ಮಾನ್ಯ ಸಿಒಪಿ (ಸ್ವಯಂ ಉದ್ಯೋಗಿ ವೃತ್ತಿಪರರು- ಚಾರ್ಟರ್ಡ್ ಅಕೌಂಟೆಂಟ್‌ಗಳು) |
| ಪ್ರಾಪರ್ಟಿ-ಸಂಬಂಧಿತ ದಾಖಲೆಗಳು | ಟೈಟಲ್ ಡೀಡ್, ಹಂಚಿಕೆ ಪತ್ರ ಮತ್ತು ಆಸ್ತಿ ತೆರಿಗೆ ರಶೀದಿಗಳು |
ಗಮನಿಸಿ: ಲೋನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು..
ಹೋಮ್ ಲೋನ್ ಬಡ್ಡಿ ದರಗಳು
ಬಜಾಜ್ ಹೌಸಿಂಗ್ ಫೈನಾನ್ಸ್ ಸಂಬಳ ಪಡೆಯುವ ಅರ್ಜಿದಾರರಿಗೆ ವರ್ಷಕ್ಕೆ 7.25%* ರಿಂದ ಆರಂಭವಾಗುವ ಸ್ಪರ್ಧಾತ್ಮಕ ದರಗಳನ್ನು ಒದಗಿಸುತ್ತದೆ.
ನಮ್ಮ ಹೌಸಿಂಗ್ ಲೋನ್ ಬಡ್ಡಿ ದರಗಳ ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಹೋಮ್ ಲೋನ್ ಫೀಸ್ ಮತ್ತು ಶುಲ್ಕಗಳು
ಅನ್ವಯವಾಗುವ ಹೋಮ್ ಲೋನ್ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್‌ಗಳನ್ನು ನೋಡಿ:
ಹೋಮ್ ಲೋನ್ ಶುಲ್ಕಗಳು
| ಶುಲ್ಕ | ಶುಲ್ಕ ಅನ್ವಯವಾಗುತ್ತದೆ |
|---|---|
| ಪ್ರಕ್ರಿಯಾ ಶುಲ್ಕ | ವಿವಿಧ ಲೋನ್ ಪ್ರಕ್ರಿಯೆ ವೆಚ್ಚಗಳನ್ನು ಕವರ್ ಮಾಡಲು ಅಪ್ಲಿಕೇಶನ್ ಹಂತದಲ್ಲಿ ನಾಮಮಾತ್ರದ ಶುಲ್ಕವನ್ನು ವಿಧಿಸಲಾಗುತ್ತದೆ. |
| ಇಎಮ್‌ಐ ಬೌನ್ಸ್ ಶುಲ್ಕಗಳು | ಪೂರ್ಣ ವಿಭಜಿತ ವಿವರಕ್ಕಾಗಿ ಕೆಳಗೆ ಒದಗಿಸಲಾದ ಟೇಬಲ್ ನೋಡಿ |
| ಪೆನಲ್ ಶುಲ್ಕಗಳು | ದಂಡ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ |
ಇಎಮ್‌ಐ ಬೌನ್ಸ್ ಶುಲ್ಕಗಳು
| ಲೋನ್ ಮೊತ್ತ | ಶುಲ್ಕಗಳು |
|---|---|
| ₹ 50 ಲಕ್ಷದವರೆಗೆ | Rs.500 |
| ರೂ. 50 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 1.5 ಕೋಟಿಯವರೆಗೆ | Rs.750 |
| ರೂ. 1.5 ಕೋಟಿಗಿಂತ ಹೆಚ್ಚು ಮತ್ತು ರೂ. 10 ಕೋಟಿಯವರೆಗೆ | Rs.3000 |
| ರೂ. 10 ಕೋಟಿಗಿಂತ ಹೆಚ್ಚು | Rs.10,000 |
ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕಗಳು
a. ಫ್ಲೋಟಿಂಗ್ ಬಡ್ಡಿ ದರಗಳಿಗೆ ಲಿಂಕ್ ಆದ ಹೋಮ್ ಲೋನ್ ಹೊಂದಿರುವ ವೈಯಕ್ತಿಕ ಸಾಲಗಾರರು: ಶೂನ್ಯ
b. ಫಿಕ್ಸೆಡ್ ದರದ ಲೋನ್‌ಗಳು (ವ್ಯಕ್ತಿಗಳನ್ನು ಒಳಗೊಂಡಂತೆ, ಎಲ್ಲಾ ಸಾಲಗಾರರು)**
| ವಿವರಗಳು | ಟರ್ಮ್ ಲೋನ್ | ಫ್ಲೆಕ್ಸಿ ಟರ್ಮ್ ಲೋನ್ | ಫ್ಲೆಕ್ಸಿ ಹೈಬ್ರಿಡ್ ಲೋನ್ |
|---|---|---|---|
| ಭಾಗಶಃ ಮುಂಪಾವತಿ ಶುಲ್ಕಗಳು | ಭಾಗಶಃ ಪಾವತಿ ಮೊತ್ತದ ಮೇಲೆ 4% | ಶೂನ್ಯ | ಶೂನ್ಯ |
| ಪೂರ್ತಿ ಮುಂಪಾವತಿ ಶುಲ್ಕಗಳು | ಬಾಕಿ ಅಸಲಿನ ಮೇಲೆ 4% | ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿಯ ಮೇಲೆ 4% | ಫ್ಲೆಕ್ಸಿ ಲೋನ್ ಬಡ್ಡಿ ಮಾತ್ರ ಮರುಪಾವತಿ ಅವಧಿಯಲ್ಲಿ ಮಂಜೂರಾದ ಮೊತ್ತದ ಮೇಲೆ 4%*; ಮತ್ತು ಫ್ಲೆಕ್ಸಿ ಟರ್ಮ್ ಲೋನ್ ಅವಧಿಯಲ್ಲಿ ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿಯ ಮೇಲೆ 4%* ವರೆಗೆ |
*ಪೂರ್ವಪಾವತಿ ಶುಲ್ಕಗಳಿಗೆ ಹೆಚ್ಚುವರಿಯಾಗಿ ಅನ್ವಯವಾಗುವ GST ಯನ್ನು ಸಾಲಗಾರರು ಪಾವತಿಸಬೇಕು.
**ಸಾಲಗಾರರು ತಮ್ಮ ಸ್ವಂತ ಮೂಲಗಳಿಂದ ಮುಚ್ಚಿದ ಹೋಮ್ ಲೋನ್‌ಗಳಿಗೆ ಶೂನ್ಯ. ಸ್ವಂತ ಮೂಲಗಳು ಎಂದರೆ ಬ್ಯಾಂಕ್/ಎನ್‌ಬಿಎಫ್‌ಸಿ/ಎಚ್ಎಫ್‌ಸಿ ಮತ್ತು/ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಇತರೆ ಯಾವುದೇ ಮೂಲವನ್ನು ಸೂಚಿಸುತ್ತದೆ.
ಗಮನಿಸಿ: ಡ್ಯುಯಲ್ ದರದ ಲೋನ್‌ಗಳ (ಆರಂಭಿಕ ಅವಧಿಗೆ ಫಿಕ್ಸೆಡ್ ಮತ್ತು ನಂತರ ಫ್ಲೋಟಿಂಗ್) ಸಂದರ್ಭದಲ್ಲಿ, ಫೋರ್‌ಕ್ಲೋಸರ್/ಭಾಗಶಃ-ಪಾವತಿ ದಿನದಂದು ಲೋನ್‌ನ ಸ್ಟೇಟಸ್ (ಫಿಕ್ಸೆಡ್/ಫ್ಲೋಟಿಂಗ್) ಪ್ರಕಾರ ಫೋರ್‌ಕ್ಲೋಸರ್/ಭಾಗಶಃ-ಪಾವತಿ ಶುಲ್ಕಗಳು ಅನ್ವಯವಾಗುತ್ತವೆ.
ಗಮನಿಸಿ: ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಹೋಮ್ ಲೋನ್‌ಗಳ ವಿಧಗಳು
ಬಜಾಜ್ ಹೌಸಿಂಗ್ ಫೈನಾನ್ಸ್ ಈ ಕೆಳಗಿನ ಉದ್ದೇಶಗಳಿಗಾಗಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ:
- ಆಸ್ತಿ ಖರೀದಿಗೆ ಹೋಮ್ ಲೋನ್: ನಿರ್ಮಾಣ ಹಂತದಲ್ಲಿರುವ ಅಥವಾ ವಾಸಕ್ಕೆ ಸಿದ್ಧವಾಗಿರುವ ಆಸ್ತಿಯನ್ನು ಖರೀದಿಸಲು, ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ದೊಡ್ಡ ಮೊತ್ತದ ಹೋಮ್ ಲೋನ್ ಪಡೆಯಬಹುದು.
- ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್: ನಾವು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಒದಗಿಸುತ್ತೇವೆ, ಇದರೊಂದಿಗೆ ನೀವು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಅನ್ನು ನಮಗೆ ಟ್ರಾನ್ಸ್‌ಫರ್ ಮಾಡಬಹುದು ಮತ್ತು ಕಡಿಮೆ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯಿಂದ ಸಂಭಾವ್ಯವಾಗಿ ಪ್ರಯೋಜನ ಪಡೆಯಬಹುದು. ಮನೆ ನವೀಕರಣಕ್ಕಾಗಿ ಟಾಪ್-ಅಪ್ ಲೋನ್ ಪಡೆಯುವ ಅವಕಾಶವನ್ನು ಕೂಡಾ ನೀವು ಪಡೆಯಬಹುದು.
ನಿಮ್ಮ ನಗರದಲ್ಲಿ ಹೋಮ್ ಲೋನ್ ಪಡೆಯಿರಿ
ಹೋಮ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ಮಾಡಬೇಕಾದ ವಿಷಯಗಳು
ನಿಮ್ಮ ಹೋಮ್ ಲೋನ್‌ಗೆ ಮುಂಚಿತವಾಗಿ ತಯಾರಾಗುವುದು ನಿಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ಯೋಜಿಸಲು ಸಹಾಯ ಮಾಡುತ್ತದೆ. ನೀವು ಅಪ್ಲೈ ಮಾಡುವ ಮೊದಲು ಪರಿಗಣಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ:
- ಅರ್ಹತಾ ಮಾನದಂಡಗಳನ್ನು ಪರಾಮರ್ಶಿಸಿ ಮತ್ತು ನೀವು ಅರ್ಹರಾಗಬಹುದಾದ ಲೋನ್ ಮೊತ್ತವನ್ನು ಅಂದಾಜು ಮಾಡಲು ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ
- ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ EMI ಗಳನ್ನು ಅಂದಾಜು ಮಾಡಿ
- ಲೋನ್‌ಗೆ ಸಂಬಂಧಿಸಿದ ಡೌನ್ ಪೇಮೆಂಟ್‌ನಂತಹ ಹೆಚ್ಚುವರಿ ಶುಲ್ಕಗಳು ಮತ್ತು ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳಂತಹ ಆಸ್ತಿ ಸಂಬಂಧಿತ ವೆಚ್ಚಗಳನ್ನು ಪರಿಗಣಿಸಿ
- ನಿಮ್ಮ FOIR (ಆದಾಯಕ್ಕೆ ಸ್ಥಿರ ಜವಾಬ್ದಾರಿ ಅನುಪಾತ) ಸುಧಾರಿಸಲು ಮತ್ತು ನಿಮ್ಮ ಖರ್ಚು ಮಾಡಲು ಲಭ್ಯವಿರುವ ಆದಾಯವನ್ನು ಹೆಚ್ಚಿಸಲು ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಪಾವತಿಸಿ
ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಹಂತಗಳು
ನಮ್ಮೊಂದಿಗೆ ಆನ್‌ಲೈನ್‌ನಲ್ಲಿ ಹೌಸಿಂಗ್ ಲೋನ್‌ಗೆ ಅಪ್ಲೈ ಮಾಡಲು, ಈ ಹಂತಗಳನ್ನು ಅನುಸರಿಸಿ:
- ಹೋಮ್ ಲೋನ್‌ಗೆ ಅಪ್ಲೈ ಮಾಡಲು, ನಮ್ಮ ಹೌಸಿಂಗ್ ಲೋನ್ ಅಪ್ಲಿಕೇಶನ್ ಫಾರ್ಮ್ ಗೆ ಭೇಟಿ ನೀಡಿ ಅಥವಾ 'ಈಗಲೇ ಅಪ್ಲೈ ಮಾಡಿ' ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಫಾರ್ಮ್‌ನಲ್ಲಿ, ಹೆಸರು ಮತ್ತು ಮೊಬೈಲ್ ನಂಬರ್‌ನಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಉದ್ಯೋಗದ ಪ್ರಕಾರವನ್ನು ಆಯ್ಕೆಮಾಡಿ.
- ನೀವು ಪಡೆಯಲು ಬಯಸುವ ಲೋನ್ ಪ್ರಕಾರವನ್ನು ಆಯ್ಕೆಮಾಡಿ. ನಂತರ, ನಿಮ್ಮ ನಿವ್ವಳ ಮಾಸಿಕ ಆದಾಯವನ್ನು, ಅಂದರೆ ನಿಮ್ಮ ಕೈಗೆ ಬರುವ ಆದಾಯವನ್ನು ನಮೂದಿಸಿ. ಇದರಲ್ಲಿ ನಿಮ್ಮ ವೇತನದ ಜೊತೆಗೆ, ಮತ್ತೊಂದು ಆಸ್ತಿಯಿಂದ ಬರುವ ಬಾಡಿಗೆ ಆದಾಯದಂತಹ ಇತರ ಮೂಲಗಳಿಂದ ಬರುವ ಆದಾಯವನ್ನೂ ಸೇರಿಸಿ.
- ನಿಮ್ಮ ವಾಸಸ್ಥಳದ ಪಿನ್ ಕೋಡ್ ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ನಮೂದಿಸಿ.
- 'OTP ಜನರೇಟ್ ಮಾಡಿ' ಕ್ಲಿಕ್ ಮಾಡಿ, ಸಂಬಂಧಿತ ಜಾಗದಲ್ಲಿ OTP ಯನ್ನು ನಮೂದಿಸಿ ಮತ್ತು ನಂತರ 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಉದ್ಯೋಗದ ಪ್ರಕಾರದ ಆಧಾರದ ಮೇಲೆ ಹಣಕಾಸು ಮತ್ತು ಆಸ್ತಿ ಸಂಬಂಧಿತ ವಿವರಗಳನ್ನು ಭರ್ತಿ ಮಾಡಿ.
- ಅಪ್ಲಿಕೇಶನ್ ಫಾರ್ಮ್ ಪೂರ್ಣಗೊಳಿಸಲು 'ಸಲ್ಲಿಸಿ' ಕ್ಲಿಕ್ ಮಾಡಿ.
ಒಮ್ಮೆ ನಾವು ನಿಮ್ಮ ಹೌಸಿಂಗ್ ಲೋನ್ ಅಪ್ಲಿಕೇಶನ್ ಪಡೆದ ನಂತರ, ಮುಂದಿನ ಹಂತಗಳ ಬಗ್ಗೆ ನಿಮಗೆ ತಿಳಿಸಲು ನಮ್ಮ ಪ್ರತಿನಿಧಿ 24 ಗಂಟೆಗಳ* ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಹೋಮ್ ಲೋನ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುವುದು ಹೇಗೆ
ಈ ಕೆಳಗಿನ ಹಂತಗಳನ್ನು ತೆಗೆದುಕೊಳ್ಳುವ ಮೂಲಕ ಹೌಸಿಂಗ್ ಲೋನ್ ಪಡೆಯುವ ಸಾಧ್ಯತೆಗಳನ್ನು ನೀವು ಹೆಚ್ಚಿಸಬಹುದು:
- ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಿ
-
- ಹೋಮ್ ಲೋನ್ ಅನುಮೋದನೆ ಪಡೆಯುವಲ್ಲಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಪ್ರಮುಖ ಅಂಶವಾಗಿರಬಹುದು. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಸಮಯಕ್ಕೆ ಸರಿಯಾಗಿ ನಿಮ್ಮ ಸಾಲಗಳನ್ನು ಪಾವತಿಸುವ ಮೂಲಕ, ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಕಡಿಮೆ ಮಾಡುವ ಮೂಲಕ ಮತ್ತು ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಯಾವುದೇ ದೋಷಗಳನ್ನು ಸರಿಪಡಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಕೆಲಸ ಮಾಡಿ.
- ಡೌನ್ ಪೇಮೆಂಟ್‌ಗಾಗಿ ಉಳಿತಾಯ ಮಾಡಿ
-
- ದೊಡ್ಡ ಮೊತ್ತದ ಡೌನ್ ಪೇಮೆಂಟ್ ಪಾವತಿಸುವುದು ಲೋನ್ ಮೊತ್ತವನ್ನು ಕಡಿಮೆ ಮಾಡುತ್ತದೆ ಹಾಗೂ ಇದು ನಿಮ್ಮ ಲೋನ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಬಹುದು. ಡೌನ್ ಪೇಮೆಂಟ್ ಆಗಿ ಆಸ್ತಿ ಮೌಲ್ಯದ ಕನಿಷ್ಠ 10% ರಿಂದ 30% ಉಳಿತಾಯ ಮಾಡುವ ಗುರಿಯನ್ನು ಹೊಂದಿರಿ, ಆಗ ನೀವು ಉಳಿದ ಮೊತ್ತದ ಮೇಲೆ ನಿಮ್ಮ ಹೋಮ್ ಲೋನ್ EMI ಗಳನ್ನು ಆರಾಮದಾಯಕವಾಗಿ ಪಾವತಿಸಬಹುದು. ಪಾವತಿಸಬೇಕಾದ ಕನಿಷ್ಠ ಡೌನ್ ಪೇಮೆಂಟ್ ಮೊತ್ತವು ಆಸ್ತಿ ಮೌಲ್ಯಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ.
- ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ
-
- ಹೌಸಿಂಗ್ ಲೋನ್‌ಗೆ ಅಪ್ಲೈ ಮಾಡಲು, ನೀವು ಗುರುತಿನ ಪುರಾವೆ, ವಿಳಾಸದ ಪುರಾವೆ, ಆದಾಯ ಪುರಾವೆ, ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ಗಳಂತಹ ಹಲವಾರು ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು. ನೀವು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿ ಇರಿಸಿದ್ದೀರಿ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಹಣಕಾಸಿನ ಸಹ-ಅರ್ಜಿದಾರರನ್ನು ಸೇರಿಸಿ
-
- ನಿಮ್ಮ ಅರ್ಹತೆಯನ್ನು ಹೆಚ್ಚಿಸಲು ನೀವು ಸ್ಥಿರ ಆದಾಯ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ನಿಮ್ಮ ಸಂಗಾತಿ, ಪೋಷಕರು ಅಥವಾ ಸಹೋದರ/ಸಹೋದರಿಯನ್ನು ಹಣಕಾಸಿನ ಸಹ-ಅರ್ಜಿದಾರರಾಗಿ ಸೇರಿಸಬಹುದು.
- ಒಂದೇ ಬಾರಿಗೆ ಅನೇಕ ಲೋನ್‌ಗಳಿಗೆ ಅಪ್ಲೈ ಮಾಡುವುದನ್ನು ತಪ್ಪಿಸಿ
-
- ಒಂದೇ ಸಮಯದಲ್ಲಿ ಅನೇಕ ಲೋನ್‌ಗಳಿಗೆ ಅಪ್ಲೈ ಮಾಡುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಮತ್ತು ನಿಮ್ಮ ಹೋಮ್ ಲೋನ್ ಅನುಮೋದನೆಯ ಅವಕಾಶಗಳನ್ನು ಕಡಿಮೆ ಮಾಡಬಹುದು.
ಹೋಮ್ ಲೋನ್ ತೆರಿಗೆ ಪ್ರಯೋಜನಗಳೊಂದಿಗೆ ಉಳಿತಾಯವನ್ನು ಹೆಚ್ಚಿಸುವುದು ಹೇಗೆ?
ಹೋಮ್ ಲೋನ್‌ನೊಂದಿಗೆ, ಸಾಲಗಾರರು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಉಳಿತಾಯವನ್ನು ಗರಿಷ್ಠಗೊಳಿಸಬಹುದು. ಈ ಕೆಳಗೆ ನೀಡಲಾದಂತೆ, ಆದಾಯ ತೆರಿಗೆ ಕಾಯ್ದೆ, 2025 ರ ವಿವಿಧ ವಿಭಾಗಗಳ ಮೂಲಕ ಹಳೆಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು:
- ಸೆಕ್ಷನ್ 123
-
- ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 123 ಅಡಿಯಲ್ಲಿ, ನಿಮ್ಮ ಹೋಮ್ ಲೋನ್‌ನ ಅಸಲು ಮರುಪಾವತಿಯ ಮೇಲೆ ನೀವು ವಾರ್ಷಿಕವಾಗಿ ರೂ. 1.5 ಲಕ್ಷದವರೆಗಿನ ಕಡಿತಗಳನ್ನು ಕ್ಲೈಮ್ ಮಾಡಬಹುದು. ಇದು ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳಿಗೆ ಪಾವತಿಸಲಾದ ಮೊತ್ತಗಳನ್ನು ಒಳಗೊಂಡಿದೆ, ಅವುಗಳನ್ನು ಸಲ್ಲಿಸಿದ ವರ್ಷದಲ್ಲಿ ಅನ್ವಯವಾಗುತ್ತದೆ.
- ಸೆಕ್ಷನ್ 22
-
- ಸೆಕ್ಷನ್ 22 ಅಡಿಯಲ್ಲಿ ನಿಮ್ಮ ಹೋಮ್ ಲೋನ್ ಮೇಲೆ ಪಾವತಿಸಿದ ಬಡ್ಡಿಯನ್ನು ಕ್ಲೈಮ್ ಮಾಡಬಹುದು. ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿಗೆ ಬಡ್ಡಿ ಪಾವತಿಗಳ ಮೇಲೆ ನೀವು ವಾರ್ಷಿಕವಾಗಿ ರೂ. 2 ಲಕ್ಷದವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ಆಸ್ತಿ ನಿರ್ಮಾಣವನ್ನು 5 ವರ್ಷಗಳ ಒಳಗೆ ಪೂರ್ಣಗೊಳಿಸಬೇಕು; ಇಲ್ಲದಿದ್ದರೆ, ಕಡಿತದ ಮೊತ್ತವು ರೂ. 30,000 ಕ್ಕೆ ಬರುತ್ತದೆ. ಆಸ್ತಿಯನ್ನು ಬಾಡಿಗೆಗೆ ನೀಡಿದರೆ, ಪೂರ್ಣ ಬಡ್ಡಿ ಮೊತ್ತವನ್ನು ಕಡಿತವಾಗಿ ಕ್ಲೈಮ್ ಮಾಡಬಹುದು.
- ಸೆಕ್ಷನ್ 130
-
- ಮೊದಲ ಬಾರಿಯ ಮನೆ ಖರೀದಿದಾರರು ಸೆಕ್ಷನ್ 130 ಅಡಿಯಲ್ಲಿ ಹೋಮ್ ಲೋನ್ ಬಡ್ಡಿಯ ಮೇಲೆ ರೂ. 50,000 ವರೆಗೆ ಹೆಚ್ಚುವರಿ ಕಡಿತವನ್ನು ಪಡೆಯಬಹುದು. ಈ ಪ್ರಯೋಜನವು 1 ಏಪ್ರಿಲ್ 2016 ಮತ್ತು 31 ಮಾರ್ಚ್ 2017 ನಡುವೆ ಮಂಜೂರಾದ ಲೋನ್‌ಗಳಿಗೆ ಅನ್ವಯವಾಗುತ್ತದೆ, ಲೋನ್ ಮೊತ್ತವು ರೂ. 35 ಲಕ್ಷಕ್ಕಿಂತ ಹೆಚ್ಚಾಗಿರಬಾರದು ಮತ್ತು ಆಸ್ತಿ ಮೌಲ್ಯವು ರೂ. 50 ಲಕ್ಷದ ಒಳಗಿರಬೇಕು.
- ಸೆಕ್ಷನ್ 131
-
- ಸೆಕ್ಷನ್ 131 ಅಡಿಯಲ್ಲಿ ಹೋಮ್ ಲೋನ್ ಬಡ್ಡಿಯ ಮೇಲೆ ನೀವು ರೂ. 1.5 ಲಕ್ಷದವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ಈ ಕಡಿತಗಳನ್ನು ಕ್ಲೈಮ್ ಮಾಡಲು, ಆಸ್ತಿಯ ಸ್ಟ್ಯಾಂಪ್ ಡ್ಯೂಟಿ ಮೌಲ್ಯವು ರೂ. 45 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಲೋನನ್ನು 1 ಏಪ್ರಿಲ್ 2019 ಮತ್ತು 31 ಮಾರ್ಚ್ 2022 ನಡುವೆ ಮಂಜೂರು ಮಾಡಬೇಕು ಎಂಬುದನ್ನು ಗಮನಿಸಬೇಕು.
ಹೌಸಿಂಗ್ ಲೋನಿಗೆ ಅಪ್ಲೈ ಮಾಡುವಾಗ ಪ್ರಮುಖ ಪರಿಗಣನೆಗಳು
ಹೋಮ್ ಲೋನ್ ದೀರ್ಘಾವಧಿಯ ಬದ್ಧತೆಯಾಗಿದೆ. ಲೋನ್ ವಿತರಣೆಯ ನಂತರ, ಕಾಲಾವಧಿಯ ಉದ್ದಕ್ಕೂ ನೀವು ನಿರ್ದಿಷ್ಟ ಮೊತ್ತವನ್ನು ಇಎಂಐ ಗಳಾಗಿ ಪಾವತಿಸಬೇಕಾಗುತ್ತದೆ. ತೊಂದರೆ ರಹಿತ ಅನುಭವಕ್ಕಾಗಿ, ನೀವು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು
ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ಮಿತಿಯೊಳಗೆ ಅಪ್ಲೈ ಮಾಡಿ .
ಈಗಲೇ ಲೆಕ್ಕ ಹಾಕಿಹೆಚ್ಚಿನ CIBIL ಸ್ಕೋರ್ ನಿಮಗೆ ಉತ್ತಮ ಮರುಪಾವತಿ ನಿಯಮಗಳನ್ನು ಪಡೆಯಲು ಅವಕಾಶ ನೀಡಬಹುದು.
ಸ್ಕೋರ್ ನೋಡಿನಿಮಗೆ ಹೆಚ್ಚಿನ ಲೋನ್ ಮೊತ್ತದ ಅಗತ್ಯವಿದ್ದರೆ, ಹಣಕಾಸಿನ ಸಹ-ಅರ್ಜಿದಾರರಾಗಿ ನಿಕಟ ಕುಟುಂಬದ ಸದಸ್ಯರನ್ನು ಸೇರಿಸುವುದನ್ನು ಪರಿಗಣಿಸಿ.
ಇನ್ನಷ್ಟು ಓದಿನಿಮಗಾಗಿ ಸರಿಯಾದ ಹೋಮ್ ಲೋನ್ ಆಯ್ಕೆಮಾಡಿ
ಹೋಮ್ ಲೋನ್ ಎಫ್ಎಕ್ಯೂಗಳು
ಹೋಮ್ ಲೋನ್ ಒಂದು ಸುರಕ್ಷಿತ ಲೋನ್ ಆಗಿದ್ದು, ಇದು ಆಸ್ತಿಯನ್ನು ಖರೀದಿಸಲು ನಿಮಗೆ ಅನುಮತಿ ನೀಡುತ್ತದೆ. ಖರೀದಿಸಲಾಗುತ್ತಿರುವ ಆಸ್ತಿಯು ಲೋನ್‌ಗೆ ಅಡಮಾನವಾಗಿ ಕಾರ್ಯನಿರ್ವಹಿಸುತ್ತದೆ.
ಹೌಸಿಂಗ್ ಲೋನ್ ಪ್ರಕ್ರಿಯಾ ಶುಲ್ಕಗಳು ಎಂದರೆ, ಪ್ರತಿ ಲೋನ್ ಅಪ್ಲಿಕೇಶನ್‌ನೊಂದಿಗೆ ವಿಧಿಸಲಾಗುವ ಮುಖ್ಯ ಶುಲ್ಕವನ್ನು ಸೂಚಿಸುತ್ತವೆ. ಇದು ವಿವಿಧ ಲೋನ್ ಪ್ರಕ್ರಿಯೆ ವೆಚ್ಚಗಳನ್ನು ನಿಭಾಯಿಸಲು ಅಪ್ಲಿಕೇಶನ್ ಹಂತದಲ್ಲಿ ವಿಧಿಸಲಾಗುವ ನಾಮಮಾತ್ರದ ಮೊತ್ತವಾಗಿದೆ.
ನೀವು ಪೂರ್ವನಿರ್ಧರಿತ ಬಡ್ಡಿ ದರದಲ್ಲಿ ಹಣವನ್ನು ಸಾಲ ಪಡೆಯುತ್ತೀರಿ ಮತ್ತು ಸಮನಾದ ಮಾಸಿಕ ಕಂತುಗಳ (ಇಎಂಐಗಳು) ಮೂಲಕ ಪೂರ್ವನಿರ್ಧರಿತ ಸಮಯದ ಚೌಕಟ್ಟಿನಲ್ಲಿ (ಕಾಲಾವಧಿ) ಬಡ್ಡಿಯೊಂದಿಗೆ ಮೊತ್ತವನ್ನು (ಅಸಲು) ಮರಳಿ ಪಾವತಿಸಲು ಒಪ್ಪುತ್ತೀರಿ.
ಲೋನ್ ಅನುಮೋದನೆ ಮತ್ತು ಪ್ರಕ್ರಿಯೆಯ ಸಮಯದಿಂದ 48 ಗಂಟೆಗಳಲ್ಲಿ* ಲೋನ್ ಮೊತ್ತವನ್ನು ವಿತರಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಜಂಟಿಯಾಗಿ ಹೋಮ್ ಲೋನ್ ಪಡೆಯುವಾಗ, ನೀವು ನಿಮ್ಮ ಪೋಷಕರು, ಸಂಗಾತಿ, ಮಕ್ಕಳು ಅಥವಾ ಸಹೋದರರೊಂದಿಗೆ ಹಣಕಾಸಿನ ಸಹ-ಅರ್ಜಿದಾರರಾಗಿ ಅಪ್ಲೈ ಮಾಡಬಹುದು. ವಿವಾಹಿತ ಹೆಣ್ಣು ಮಕ್ಕಳನ್ನು ಸೇರಿದಂತೆ ಕೆಲವು ಸಂಬಂಧಗಳಿಗೆ ಇಲ್ಲಿ ವಿನಾಯಿತಿಗಳಾಗಿವೆ.


















