ಬಜಾಜ್ ಹೌಸಿಂಗ್ ಫೈನಾನ್ಸ್ ಗ್ರಾಹಕ ಪೋರ್ಟಲ್: ಮೇಲ್ನೋಟ
ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ನಿಮ್ಮ ಮರುಪಾವತಿ ಪ್ರಯಾಣದಲ್ಲಿ ಸಾಟಿ ಇಲ್ಲದ ಸುಲಭತೆ ಮತ್ತು ಅನುಕೂಲವನ್ನು ಅನುಭವಿಸಿ. ನಿಮ್ಮ ಲೋನ್ ವಿವರಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಬೆರಳತುದಿಯಲ್ಲಿ ಅಕ್ಸೆಸ್ ಮಾಡಲು ನಮ್ಮ ಗ್ರಾಹಕ ಪೋರ್ಟಲ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಬಜಾಜ್ ಹೌಸಿಂಗ್ ಫೈನಾನ್ಸ್ ಗ್ರಾಹಕ ಪೋರ್ಟಲ್: ಫೀಚರ್ ಮತ್ತು ಪ್ರಯೋಜನಗಳು
ಬಜಾಜ್ ಹೌಸಿಂಗ್ ಫೈನಾನ್ಸ್ ಗ್ರಾಹಕ ಪೋರ್ಟಲ್ ನಿಮ್ಮ ಲೋನಿಗೆ ಸಂಬಂಧಿಸಿದ ವಿವಿಧ ಮಾಹಿತಿ ಮತ್ತು ಕಾರ್ಯಗಳನ್ನು ಆನ್ಲೈನಿನಲ್ಲಿ ಅಕ್ಸೆಸ್ ಮಾಡಲು ನಿಮಗೆ ಅನುಮತಿ ನೀಡುತ್ತದೆ, ನಿಮ್ಮ ಸಮಯ ಮತ್ತು ಪ್ರಯತ್ನವನ್ನು ಉಳಿಸುತ್ತದೆ. ನಮ್ಮ ವ್ಯಾಪಕ ಶ್ರೇಣಿಯ ಸ್ವಯಂ-ಸೇವಾ ಆಯ್ಕೆಗಳಿಂದ ಪ್ರಯೋಜನ ಪಡೆಯಿರಿ:
- ಅಕೌಂಟ್ ಸ್ಟೇಟ್ಮೆಂಟ್, ಮರುಪಾವತಿ ಶೆಡ್ಯೂಲ್, ತಾತ್ಕಾಲಿಕ ಬಡ್ಡಿ ಪ್ರಮಾಣಪತ್ರ ಮತ್ತು ಬಡ್ಡಿ ಪ್ರಮಾಣಪತ್ರದಂತಹ ಪ್ರಮುಖ ಸ್ಟೇಟ್ಮೆಂಟ್‌ಗಳನ್ನು ಅಕ್ಸೆಸ್ ಮಾಡಿ ಮತ್ತು ಡೌನ್ಲೋಡ್ ಮಾಡಿ.
- ಇಎಂಐ ಮೊತ್ತವನ್ನು ಹೆಚ್ಚಿಸುವ ಮೂಲಕ ಅಥವಾ ನಿಮ್ಮ ಪ್ರಸ್ತುತ ಹಣಕಾಸಿನ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಮರುಪಾವತಿ ಅವಧಿಯನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ಸರಿಹೊಂದಿಸಿ.
- ಭಾಗಶಃ-ಮುಂಪಾವತಿಗಳನ್ನು ಮಾಡಿ ಮತ್ತು ನಿಮ್ಮ ಪಾವತಿ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೈಜ-ಸಮಯದ ಅಪ್ಡೇಟ್‌ಗಳನ್ನು ಪಡೆಯಿರಿ.
- ದಂಡಗಳು ಮತ್ತು ಶುಲ್ಕಗಳನ್ನು ತಪ್ಪಿಸಲು ಸುಲಭ ಪಾವತಿ ಆಯ್ಕೆಗಳ ಮೂಲಕ ಆನ್ಲೈನಿನಲ್ಲಿ ಮುಂಗಡ ಅಥವಾ ಗಡುವು ಮೀರಿದ ಇಎಂಐಗಳನ್ನು ಪಾವತಿಸಿ.
- ಫಂಡ್‌ಗಳಿಗೆ ಸುಲಭವಾದ ಅಕ್ಸೆಸ್ ಪಡೆಯಲು ಪೋರ್ಟಲ್ ಮೂಲಕ ನಿಮ್ಮ ಲೋನ್ ಮೇಲೆ ಟಾಪ್-ಅಪ್ ಕೋರಿಕೆ ಸಲ್ಲಿಸಿ.
ಬಜಾಜ್ ಹೌಸಿಂಗ್ ಫೈನಾನ್ಸ್ ಗ್ರಾಹಕ ಪೋರ್ಟಲ್: ಅಕ್ಸೆಸ್ ಮತ್ತು ಲಾಗಿನ್ ಪ್ರಕ್ರಿಯೆ
ಬಜಾಜ್ ಹೌಸಿಂಗ್ ಫೈನಾನ್ಸ್ ಗ್ರಾಹಕ ಪೋರ್ಟಲ್ ಅಕ್ಸೆಸ್ ಮಾಡುವುದು ಸರಳವಾಗಿದೆ. ಸ್ಕ್ರೀನಿನ ಮೇಲ್ಭಾಗದಲ್ಲಿರುವ 'ಲಾಗಿನ್' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು 'ಗ್ರಾಹಕ' ಎಂಬುದನ್ನು ಆಯ್ಕೆಮಾಡಿ ಮತ್ತು 'ಲಾಗಿನ್' ಮೇಲೆ ಕ್ಲಿಕ್ ಮಾಡಿ’. ನೀವು ಅಸ್ತಿತ್ವದಲ್ಲಿರುವ ಬಳಕೆದಾರರಾಗಿದ್ದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಯಲ್ಲಿ ಪಡೆದ ಒಟಿಪಿ ಬಳಸಿ ನೀವು ಲಾಗಿನ್ ಮಾಡಬಹುದು.
- ಪರ್ಯಾಯವಾಗಿ, ನಿಮ್ಮ ಗ್ರಾಹಕ ಐಡಿ (ಸಿಐಎಫ್) ಮತ್ತು ಪಾಸ್ವರ್ಡ್ ನಮೂದಿಸುವ ಮೂಲಕ ನೀವು ಲಾಗಿನ್ ಮಾಡಬಹುದು.
- ಲಾಗಿನ್ ವಿವರಗಳನ್ನು ನಮೂದಿಸಿದ ನಂತರ 'ಖಚಿತಪಡಿಸಿ' ಆಯ್ಕೆಮಾಡಿ.
- ಯಶಸ್ವಿಯಾಗಿ ಲಾಗಿನ್ ಮಾಡಿದ ನಂತರ ನಿಮಗೆ ಅಗತ್ಯವಿರುವ ವಿವರಗಳನ್ನು ಅಕ್ಸೆಸ್ ಮಾಡಿ.
ನೀವು ಮೊದಲ ಬಾರಿಯ ಬಳಕೆದಾರರಾಗಿದ್ದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ನಿಮ್ಮ ಗ್ರಾಹಕ ಐಡಿ (ಸಿಐಎಫ್) ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರನ್ನು ನಮೂದಿಸಿ.
- ನಿಮ್ಮ ಜನ್ಮದಿನಾಂಕವನ್ನು ಆಯ್ಕೆಮಾಡಿ.
- ನಿಮ್ಮ ನೋಂದಾಯಿತ ಇಮೇಲ್ ಐಡಿಯನ್ನು ನಮೂದಿಸಿ.
- ನೀಡಲಾದ 'ಕ್ಯಾಪ್ಚಾ' ನಮೂದಿಸಿ ಮತ್ತು 'ಮುಂದುವರೆಯಿರಿ' ಕ್ಲಿಕ್ ಮಾಡಿ’.
- ನಿಮ್ಮ ಪಾಸ್ವರ್ಡ್ ಸೆಟ್ ಮಾಡಿ ಮತ್ತು ನಂತರ ನಿಮ್ಮನ್ನು ಮುಖ್ಯ ಲಾಗಿನ್ ಪೇಜಿಗೆ ಮರುನಿರ್ದೇಶಿಸಲಾಗುತ್ತದೆ.
- ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಮೇಲೆ ವಿವರಿಸಲಾದ ಹಂತಗಳನ್ನು ಅನುಸರಿಸಿ ಮತ್ತು ಲಾಗಿನ್ ಮಾಡಿ.
- ನೀವು ಬಯಸುವ ವಿವರಗಳನ್ನು ಅಕ್ಸೆಸ್ ಮಾಡಲು ಅಕೌಂಟನ್ನು ಬಳಸಿ.
ನಿಮ್ಮ ಲೋನ್ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಈ ಕೆಳಗಿನ ವಿಧಾನಗಳ ಮೂಲಕ ಬಜಾಜ್ ಹೌಸಿಂಗ್ ಫೈನಾನ್ಸ್ ಅನ್ನು ಸಂಪರ್ಕಿಸಬಹುದು:
- ಇಮೇಲ್ ಐಡಿ: bhflwecare@bajajhousing.co.in
- ಕಾಂಟಾಕ್ಟ್ ನಂಬರ್: 022 4529 7300
ಸಾಲಗಾರರು ಅಧಿಕೃತ ಬಜಾಜ್ ಹೌಸಿಂಗ್ ಫೈನಾನ್ಸ್ ಆ್ಯಪ್ ಮೂಲಕ ಅದೇ ಸೇವೆಗಳನ್ನು ಡೌನ್ಲೋಡ್ ಮಾಡುವ ಮತ್ತು ಪಡೆಯುವ ಆಯ್ಕೆಯನ್ನು ಕೂಡ ಹೊಂದಿದ್ದಾರೆ, ಇದು Play Store ಅಥವಾ App Store ನಲ್ಲಿ ಲಭ್ಯವಿದೆ. ತಡೆರಹಿತ ಆನ್ಲೈನ್ ಲೋನ್ ನಿರ್ವಹಣಾ ಪರಿಸರ ವ್ಯವಸ್ಥೆಯನ್ನು ಪ್ರವೇಶಿಸಲು ಡೌನ್ಲೋಡ್ ಮಾಡಿ.
ಸಂಬಂಧಿತ ಲೇಖನಗಳು
ಎರಡನೇ ಹೋಮ್ ಲೋನಿಗೆ ಅಪ್ಲೈ ಮಾಡಲಾಗುತ್ತಿದೆ
513 3 ನಿಮಿಷ
ಎನ್ಒಸಿ ಪತ್ರ ಎಂದರೇನು?
562 2 ನಿಮಿಷ