ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಹೇಗೆ?
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಬ್ಯಾಲೆನ್ಸ್ ಅನ್ನು ಹೊಸ ಸಾಲದಾತರಿಗೆ ವರ್ಗಾಯಿಸಲು ನಿಮಗೆ ಅನುಮತಿ ನೀಡುತ್ತದೆ. ನೀವು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿದ್ದರೆ, ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರ ಮತ್ತು ಉತ್ತಮ ಮರುಪಾವತಿ ನಿಯಮಗಳನ್ನು ಆನಂದಿಸಲು ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಬಳಸಬಹುದು.
ನೀವು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಬಹುದು ಮತ್ತು ಸಂಬಳ ಪಡೆಯುವ ಅರ್ಜಿದಾರರಿಗೆ ವರ್ಷಕ್ಕೆ 7.60%* ರಷ್ಟು ಕಡಿಮೆಯಿಂದ ಆರಂಭವಾಗುವ ಸ್ಪರ್ಧಾತ್ಮಕ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಡ್ಡಿ ದರವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ನೀವು ದೊಡ್ಡ ಟಾಪ್-ಅಪ್ ಲೋನನ್ನು ಕೂಡ ಪಡೆಯಬಹುದು ಮತ್ತು ತ್ವರಿತ ಗ್ರಾಹಕ ಸೇವೆಯಿಂದ ಪ್ರಯೋಜನ ಪಡೆಯಬಹುದು. ಯಾವುದೇ ಹೌಸಿಂಗ್ ಸಂಬಂಧಿತ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು ಟಾಪ್-ಅಪ್ ಲೋನ್ ಬಳಸಬಹುದು.
ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವುದನ್ನು ಸುಲಭಗೊಳಿಸಲು ನಾವು ಸರಳ ಅರ್ಹತಾ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಸೌಲಭ್ಯವನ್ನು ಒದಗಿಸುತ್ತೇವೆ..
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಫೀಚರ್‌ಗಳು

ದೊಡ್ಡ ಗಾತ್ರದ ಟಾಪ್-ಅಪ್ ಮೊತ್ತ
ನೀವು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿದಾಗ, ನೀವು ದೊಡ್ಡ ಟಾಪ್-ಅಪ್ ಲೋನ್ ಪಡೆಯುವ ಆಯ್ಕೆಯನ್ನು ಹೊಂದಿದ್ದೀರಿ, ಇದನ್ನು ನೀವು ಹೊಂದಿರಬಹುದಾದ ಯಾವುದೇ ಹೌಸಿಂಗ್ ಅಗತ್ಯಗಳಿಗೆ ಉಚಿತವಾಗಿ ಬಳಸಬಹುದು.

ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಷರ್ ಸೌಲಭ್ಯ
ಫ್ಲೋಟಿಂಗ್ ಬಡ್ಡಿ ದರದ ಮೇಲೆ ಹೌಸಿಂಗ್ ಲೋನ್ ಹೊಂದಿರುವ ವ್ಯಕ್ತಿಗಳು ತಮ್ಮ ಅವಧಿ ಮುಗಿಯುವ ಮೊದಲು ತಮ್ಮ ಲೋನನ್ನು ಪಾವತಿಸಲು ಆಯ್ಕೆ ಮಾಡಿದರೆ ಯಾವುದೇ ಪೂರ್ವಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕಗಳನ್ನು ಎದುರಿಸುವುದಿಲ್ಲ. ಆದಾಗ್ಯೂ, ಬಿಸಿನೆಸ್ ಉದ್ದೇಶಗಳಿಗಾಗಿ ಲೋನ್ ಪಡೆದ ವ್ಯಕ್ತಿಗಳು ಮತ್ತು ವ್ಯಕ್ತಿಗಳಲ್ಲದ ಸಾಲಗಾರರಿಗೆ ಇದು ಬದಲಾಗಬಹುದು ಎಂಬುದನ್ನು ಗಮನಿಸಿ.

ಫ್ಲೆಕ್ಸಿಬಲ್ ಮರುಪಾವತಿ ಅವಧಿ
ಆರಾಮದಾಯಕ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಬಜಾಜ್ ಹೌಸಿಂಗ್ ಫೈನಾನ್ಸ್ ಅರ್ಜಿದಾರರಿಗೆ ದೀರ್ಘ ಮರುಪಾವತಿ ಅವಧಿಯ ಆಯ್ಕೆಯನ್ನು ಒದಗಿಸುತ್ತದೆ.

ಕಡಿಮೆ ಡಾಕ್ಯುಮೆಂಟೇಶನ್
ಹೋಮ್ ಲೋನ್ ಅಪ್ಲಿಕೇಶನ್ ದೀರ್ಘವಾಗಿರಬಹುದು ಮತ್ತು ಕಠಿಣವಾಗಿರಬಹುದು. ಅರ್ಜಿದಾರರು ತಮ್ಮ ಕನಸಿನ ಮನೆಗೆ ತ್ವರಿತ ಮತ್ತು ಸುಲಭವಾದ ಮಾರ್ಗವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ನಾವು ನಮ್ಮ ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಕನಿಷ್ಠವಾಗಿ ಇರಿಸುತ್ತೇವೆ.

ಆನ್‌ಲೈನ್ ಅಕೌಂಟ್ ನಿರ್ವಹಣೆ
ನಮ್ಮ ಗ್ರಾಹಕ ಪೋರ್ಟಲ್ ಯಾವುದೇ ಸಮಯದಲ್ಲಿ ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ನಿಮ್ಮ ಹೋಮ್ ಲೋನಿನ ವಿವರಗಳನ್ನು ಅಕ್ಸೆಸ್ ಮಾಡಲು ನಿಮಗೆ ಅನುಮತಿ ನೀಡುತ್ತದೆ.

ಆನ್ಲೈನ್ ಹೋಮ್ ಲೋನ್ ಕ್ಯಾಲ್ಕುಲೇಟರ್‌ಗಳು
ಲೋನನ್ನು ಆಯ್ಕೆ ಮಾಡುವ ಮೊದಲು, ನೀವು ನಿಮ್ಮ ಹೋಮ್ ಲೋನ್ ಇಎಂಐ, ಅರ್ಹತೆ ಮತ್ತು ಇತರ ವಿವರಗಳನ್ನು ಲೆಕ್ಕ ಹಾಕಬೇಕು. ಇದಕ್ಕಾಗಿ, ನಾವು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಂತಹ ಸಾಧನಗಳನ್ನು ಒದಗಿಸುತ್ತೇವೆ

ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್
ನಾವು ದೇಶಾದ್ಯಂತ ಶಾಖೆಗಳ ಜಾಲವನ್ನು ಹೊಂದಿದ್ದೇವೆ. ನೀವು ಸಹಾಯಹಸ್ತವನ್ನು ಹುಡುಕುತ್ತಿದ್ದರೆ, ನಮ್ಮ ಶಾಖೆಗಳಲ್ಲಿ ಒಂದಕ್ಕೆ ಭೇಟಿ ನೀಡಿ
ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಯೋಜನಗಳನ್ನು ಲೆಕ್ಕ ಹಾಕಿ
ರೂ. 0
ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ನೊಂದಿಗೆ ಉಳಿತಾಯವಾದ ಒಟ್ಟು ಮೊತ್ತ
ಈಗಲೇ ಅಪ್ಲೈ ಮಾಡಿ
ಎಲ್ಲಾ ಕ್ಯಾಲ್ಕುಲೇಟರ್‌ಗಳು
ಹೌಸಿಂಗ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಯೋಜನಗಳು
ಹೋಮ್ ಲೋನನ್ನು ವರ್ಗಾಯಿಸುವಲ್ಲಿ ಹಲವಾರು ಪ್ರಯೋಜನಗಳಿವೆ.
- ಕಡಿಮೆ ಬಡ್ಡಿ ದರಗಳು: ನಿಮ್ಮ ಹೋಮ್ ಲೋನ್ ಮೇಲಿನ ಅಸ್ತಿತ್ವದಲ್ಲಿರುವ ಬಡ್ಡಿ ದರಕ್ಕೆ ಹೋಲಿಸಿದರೆ ಕಡಿಮೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಡ್ಡಿ ದರವನ್ನು ಪಡೆಯುವ ಅವಕಾಶ ಪಡೆಯುವುದು ಈ ಸೌಲಭ್ಯದ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ. ಇದು ಮರುಪಾವತಿಯ ಸಮಯದಲ್ಲಿ ಹೆಚ್ಚು ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ, ನಿಮ್ಮ ಇಎಂಐಗಳ ನಿರ್ವಹಣೆಯನ್ನು ಸುಲಭವಾಗಿಸುತ್ತದೆ. ಇದು ನಿಮಗೆ ಲೋನ್ ಅನ್ನು ಶೀಘ್ರದಲ್ಲಿ ಪಾವತಿಸಲು ಕೂಡ ಅನುಮತಿಸಬಹುದು.
- ಟಾಪ್-ಅಪ್ ಲೋನ್‌ನ ಲಭ್ಯತೆ: ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪಡೆಯುವಾಗ ನೀವು ಟಾಪ್-ಅಪ್ ಲೋನನ್ನು ಕೂಡ ಪಡೆಯಬಹುದು. ಈ ಲೋನ್ ಅನ್ನು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೊತ್ತದ ಮೇಲೆ ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಫ್ಲೆಕ್ಸಿಬಲ್ ಅಂತಿಮ ಬಳಕೆಯೊಂದಿಗೆ ಬರುತ್ತದೆ. ನೀವು ಇದನ್ನು ವಿವಿಧ ವಸತಿ ವೆಚ್ಚಗಳನ್ನು ಪೂರೈಸಲು ಬಳಸಬಹುದು. ಇದು ದೀರ್ಘ ಮರುಪಾವತಿ ಅವಧಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರದೊಂದಿಗೆ ಬರುತ್ತದೆ. ಒಟ್ಟಿನಲ್ಲಿ, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ ಹೋಮ್ ಲೋನ್ ಜೊತೆಯಾಗಿ ನಿಮ್ಮ ಹೋಮ್ ಫೈನಾನ್ಸ್‌ಗಳನ್ನು ಸುಲಭವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತವೆ.
- ಲೋನ್ ನಿಯಮಗಳ ಮರುಪಡೆಯುವಿಕೆ: ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯು ನಿಮ್ಮ ಹೋಮ್ ಲೋನಿನ ನಿಯಮಗಳನ್ನು ಮರುಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಹೋಮ್ ಲೋನನ್ನು ಉತ್ತಮವಾಗಿ, ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
- ಉತ್ತಮ ಗ್ರಾಹಕ ಸೇವೆ ಮತ್ತು ಸೌಲಭ್ಯಗಳು: ಆನ್‌ಲೈನ್ ಅಕೌಂಟ್ ನಿರ್ವಹಣೆ, ಡಿಜಿಟಲ್ ಪ್ರಕ್ರಿಯೆಗಳು, ಇತರ ಹಣಕಾಸು ಸೇವೆಗಳಿಗೆ ಪೂರ್ವ-ಅರ್ಹ ಆಫರ್‌ಗಳು ಮತ್ತು ಇನ್ನೂ ಅನೇಕ ಉತ್ತಮ ಗ್ರಾಹಕ ಸೇವೆಯನ್ನು ಆನಂದಿಸಲು ನಿಮ್ಮ ಹೋಮ್ ಲೋನ್ ಟ್ರಾನ್ಸ್‌ಫರ್ ಮಾಡುವುದನ್ನು ಕೂಡ ನೀವು ಪರಿಗಣಿಸಬಹುದು. ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ನೀವು ನಮ್ಮ ಗ್ರಾಹಕ ಪೋರ್ಟಲ್ ಮೂಲಕ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟ್ ಅನ್ನು ನಿರ್ವಹಿಸಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆ ಎಂದರೇನು?
ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ನಮಗೆ ಟ್ರಾನ್ಸ್‌ಫರ್ ಮಾಡಲು ಬಯಸುತ್ತಿದ್ದೀರಾ? ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆಯು ಸಾಮಾನ್ಯವಾಗಿ ಹೇಗಿರುತ್ತದೆ ಎಂಬುದರ ಸರಳ ವಿವರಣೆ ಇಲ್ಲಿದೆ:
- ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅಪ್ಲಿಕೇಶನ್ ಅನ್ನು ನಮಗೆ ಸಲ್ಲಿಸುವ ಮೂಲಕ ಆರಂಭಿಸಿ. ನಾವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುತ್ತೇವೆ ಮತ್ತು ಲೋನ್ ಅನುಮೋದಿಸುವ ಮೊದಲು ನಿಮ್ಮ ಅರ್ಹತೆಯನ್ನು ಮೌಲ್ಯಮಾಪನ ಮಾಡುತ್ತೇವೆ.
- ಒಮ್ಮೆ ಲೋನ್ ಅನುಮೋದನೆಗೊಂಡ ನಂತರ, ಲೋನ್ ಟ್ರಾನ್ಸ್‌ಫರ್ ಮಾಡುವ ನಿಮ್ಮ ನಿರ್ಧಾರದ ಬಗ್ಗೆ ನೀವು ನಿಮ್ಮ ಪ್ರಸ್ತುತ ಸಾಲದಾತರಿಗೆ ತಿಳಿಸಬಹುದು. ನೀವು ಇದನ್ನು ಔಪಚಾರಿಕ ಪತ್ರ ಅಥವಾ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕೋರಿಕೆ ಫಾರ್ಮ್ ಮೂಲಕ ಮಾಡಬಹುದು.
- ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರು ನಿಮ್ಮ ಕೋರಿಕೆಯನ್ನು ಪರಿಶೀಲಿಸುತ್ತಾರೆ ಮತ್ತು ಎಲ್ಲವೂ ಸರಿಯಾಗಿದ್ದರೆ ಸಮ್ಮತಿ ಪತ್ರ ಅಥವಾ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ನೀಡುತ್ತಾರೆ.
- ಪರಿಶೀಲನೆಗಾಗಿ ಎನ್‌ಒಸಿ ಮತ್ತು ಫೋರ್‌ಕ್ಲೋಸರ್ ಪತ್ರವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಒಮ್ಮೆ ಪರಿಶೀಲಿಸಿದ ನಂತರ, ಬಾಕಿ ಉಳಿದ ಲೋನ್ ಮೊತ್ತವನ್ನು ನಿಮ್ಮ ಹಿಂದಿನ ಸಾಲದಾತರಿಗೆ ಪಾವತಿಸಲಾಗುತ್ತದೆ. ಈ ಹಂತದಲ್ಲಿ ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಶುಲ್ಕವನ್ನು ಪಾವತಿಸಬೇಕಾಗಬಹುದು. - ಇದರ ನಂತರ, ನಮ್ಮೊಂದಿಗೆ ನಿಮ್ಮ ಹೊಸ ಲೋನ್ ಅಕೌಂಟ್ ತೆರೆಯಲಾಗುತ್ತದೆ, ಮತ್ತು ನೀವು ಹೊಸ ನಿಯಮಗಳ ಅಡಿಯಲ್ಲಿ ನಿಮ್ಮ ಇಎಂಐಗಳನ್ನು ಪಾವತಿಸಲು ಆರಂಭಿಸಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅರ್ಹತಾ ಮಾನದಂಡ
ನೀವು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಇತರ ಪ್ರಯೋಜನಗಳಿಗಾಗಿ ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಲು ಬಯಸಿದರೆ, ನೀವು ಪೂರೈಸಬೇಕಾದ ಕೆಲವು ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:
ಸಂಬಳದ ವ್ಯಕ್ತಿಗಳಿಗೆ
- ನೀವು ಭಾರತೀಯ ನಾಗರಿಕರಾಗಿರಬೇಕು (ಎನ್ಆರ್‌ಐಗಳು ಒಳಗೊಂಡಿದ್ದಾರೆ)
- ನೀವು 23 ಮತ್ತು 62 ವರ್ಷಗಳ** ನಡುವಿನ ವಯಸ್ಸಿನವರಾಗಿರಬೇಕು
- ಸಾರ್ವಜನಿಕ/ಖಾಸಗಿ ವಲಯದ ಕಂಪನಿ ಅಥವಾ ಎಂಎನ್‌ಸಿಯೊಂದಿಗೆ ನೀವು ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
- ನೀವು ಭಾರತೀಯ ನಾಗರಿಕರಾಗಿರಬೇಕು (ನಿವಾಸಿ ಮಾತ್ರ)
- ನೀವು 23 ಮತ್ತು 70 ವರ್ಷಗಳ** ನಡುವಿನ ವಯಸ್ಸಿನವರಾಗಿರಬೇಕು
- ನೀವು ಕನಿಷ್ಠ 3 ವರ್ಷಗಳ ಹಿನ್ನೆಲೆಯನ್ನು ಹೊಂದಿರುವ ಉದ್ಯಮದಿಂದ ಸ್ಥಿರ ಆದಾಯವನ್ನು ಪ್ರದರ್ಶಿಸಲು ಸಾಧ್ಯವಾಗಿರಬೇಕು
**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.
ಅರ್ಹತಾ ಅವಶ್ಯಕತೆಗಳು ಸೂಚನಾತ್ಮಕವಾಗಿವೆ ಮತ್ತು ಹೆಚ್ಚುವರಿ ಮಾನದಂಡಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು*** ಸಲ್ಲಿಸಬೇಕಾಗುತ್ತದೆ:
- ಕೆವೈಸಿ ಡಾಕ್ಯುಮೆಂಟ್‌ಗಳು (ಗುರುತಿನ ಮತ್ತು ವಿಳಾಸದ ಪುರಾವೆಗಳು)
- ಕಡ್ಡಾಯ ಡಾಕ್ಯುಮೆಂಟ್‌ಗಳು (ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60)
- ಛಾಯಾಚಿತ್ರಗಳು
- ಆದಾಯ ಪುರಾವೆ ಡಾಕ್ಯುಮೆಂಟ್‌ಗಳು, ಫಾರ್ಮ್ 16 ಅಥವಾ ಇತ್ತೀಚಿನ ಸಂಬಳದ ಸ್ಲಿಪ್‌ಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ) / ಕಳೆದ ಎರಡು ವರ್ಷಗಳ ಐಟಿಆರ್ ಡಾಕ್ಯುಮೆಂಟ್ ಮತ್ತು ಪಿ&ಎಲ್ ಸ್ಟೇಟ್ಮೆಂಟ್ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)
- ಹಿಂದಿನ ಆರು ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
- ಕನಿಷ್ಠ 5 ವರ್ಷಗಳ ಬಿಸಿನೆಸ್ ಹಿನ್ನೆಲೆ ಪುರಾವೆ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಮಾತ್ರ)
***ದಯವಿಟ್ಟು ಗಮನಿಸಿ, ಈ ಪಟ್ಟಿಯಲ್ಲಿರುವ ಡಾಕ್ಯುಮೆಂಟ್‌ಗಳು ಸೂಚನೆಗಾಗಿ ಮಾತ್ರ ಆಗಿವೆ. ಲೋನ್ ಪ್ರಕ್ರಿಯೆಯ ಸಮಯದಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು. ಈ ಅವಶ್ಯಕತೆಗಳನ್ನು ಅದಕ್ಕೆ ಅನುಗುಣವಾಗಿ ನಿಮಗೆ ತಿಳಿಸಲಾಗುತ್ತದೆ.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡುವುದು ಹೇಗೆ
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡಲು, ಕೆಳಗಿನ ಹಂತಗಳನ್ನು ಅನುಸರಿಸಿ:
- ನಮ್ಮ ಆನ್ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಗೆ ಭೇಟಿ ನೀಡಿ.
- ಹೆಸರು, ಮೊಬೈಲ್ ನಂಬರ್‌ನಂತಹ ಅಗತ್ಯ ವಿವರಗಳನ್ನು ಸಲ್ಲಿಸಿ ಮತ್ತು ಉದ್ಯೋಗದ ಪ್ರಕಾರವನ್ನು ಆಯ್ಕೆಮಾಡಿ.
- ನೀವು ಪಡೆಯಲು ಬಯಸುವ ಲೋನ್ ಪ್ರಕಾರವನ್ನು ಆಯ್ಕೆಮಾಡಿ. (ಗಮನಿಸಿ: ನೀವು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅಥವಾ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ + ಟಾಪ್-ಅಪ್ ಲೋನನ್ನು ಆಯ್ಕೆ ಮಾಡಬಹುದು.)
- ನಿಮ್ಮ ನಿವ್ವಳ ಮಾಸಿಕ ಆದಾಯವನ್ನು ನಮೂದಿಸಿ. (ಗಮನಿಸಿ: ನೀವು ನಮೂದಿಸಬೇಕಾದ ಮಾಸಿಕ ಆದಾಯದ ಬಗ್ಗೆ ಹೆಚ್ಚು ತಿಳಿಯಲು ಮಾಹಿತಿ ಐಕಾನ್ ಕ್ಲಿಕ್ ಮಾಡಿ.)
- ಪಿನ್ ಕೋಡ್ ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ನಮೂದಿಸಿ.
- 'ಒಟಿಪಿ ಜನರೇಟ್ ಮಾಡಿ' ಕ್ಲಿಕ್ ಮಾಡಿ ಮತ್ತು ಆಯಾ ಕ್ಷೇತ್ರದಲ್ಲಿ ಪಡೆದ ಒಟಿಪಿ ಯನ್ನು ನಮೂದಿಸಿ. ಒಟಿಪಿ ನಮೂದಿಸಿದ ನಂತರ, 'ಮುಂದುವರೆಯಿರಿ' ಕ್ಲಿಕ್ ಮಾಡಿ'.
- ಕೋರಲಾದಂತೆ ಎಲ್ಲಾ ಹಣಕಾಸಿನ ವಿವರಗಳನ್ನು ಪಾಪ್ಯುಲೇಟ್ ಮಾಡಿ ಮತ್ತು ಫಾರ್ಮ್ ಪೂರ್ಣಗೊಳಿಸಿ. (ಗಮನಿಸಿ: ನೀವು ಭರ್ತಿ ಮಾಡಬೇಕಾದ ಕ್ಷೇತ್ರಗಳು ನಿಮ್ಮ ಉದ್ಯೋಗ ಪ್ರಕಾರದ ಆಧಾರದ ಮೇಲೆ ಬದಲಾಗಬಹುದು.)
- ಅಪ್ಲಿಕೇಶನ್ ಫಾರ್ಮ್ ಸಲ್ಲಿಸಲು 'ಸಲ್ಲಿಸಿ' ಕ್ಲಿಕ್ ಮಾಡಿ.
ಹೌಸಿಂಗ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್: ಬಡ್ಡಿ ದರಗಳು, ಫೀಸ್ ಮತ್ತು ಶುಲ್ಕಗಳು
ಬಜಾಜ್ ಹೌಸಿಂಗ್ ಫೈನಾನ್ಸ್ ಒದಗಿಸುವ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವು ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಸುಗಮ ಮತ್ತು ತೊಂದರೆ ರಹಿತವಾಗಿಸುವ ಅನುಭವವನ್ನು ಹೊಂದಿರುವ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ.
ಸಂಬಳ ಪಡೆಯುವ ಮತ್ತು ವೃತ್ತಿಪರ ಅರ್ಜಿದಾರರಿಗೆ ಬಡ್ಡಿ ದರಗಳು
ಸಂಬಳದ ಫ್ಲೋಟಿಂಗ್ ರೆಫರೆನ್ಸ್ ದರ: 15.10%*
ಹೋಮ್ ಲೋನ್ ಬಡ್ಡಿ ದರ (ಫ್ಲೋಟಿಂಗ್)
ಲೋನ್ ಪ್ರಕಾರ | ಪರಿಣಾಮಕಾರಿ ಆರ್‌ಒಐ (ವಾರ್ಷಿಕವಾಗಿ) |
---|---|
ಹೋಮ್ ಲೋನ್ | 7.49%* ರಿಂದ 10.25%* |
ಹೋಮ್ ಲೋನ್ (ಬ್ಯಾಲೆನ್ಸ್ ವರ್ಗಾವಣೆ) | 7.60%* ರಿಂದ 10.35%* |
ಟಾಪ್-ಅಪ್ ಲೋನ್ | 7.75%* ರಿಂದ 10.40%* |
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಬಡ್ಡಿ ದರಗಳು
ಸ್ವಯಂ ಉದ್ಯೋಗಿ ಫ್ಲೋಟಿಂಗ್ ರೆಫರೆನ್ಸ್ ದರ: 16.20%*
ಹೋಮ್ ಲೋನ್ ಬಡ್ಡಿ ದರ (ಫ್ಲೋಟಿಂಗ್)
ಲೋನ್ ಪ್ರಕಾರ | ಪರಿಣಾಮಕಾರಿ ಆರ್‌ಒಐ (ವಾರ್ಷಿಕವಾಗಿ) |
---|---|
ಹೋಮ್ ಲೋನ್ | 7.85%* ರಿಂದ 10.65%* |
ಹೋಮ್ ಲೋನ್ (ಬ್ಯಾಲೆನ್ಸ್ ವರ್ಗಾವಣೆ) | 8.00%* ರಿಂದ 10.80%* |
ಟಾಪ್-ಅಪ್ ಲೋನ್ | 9.05%* ರಿಂದ 10.85%* |
ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರು ರೆಪೋ ದರ ಲಿಂಕ್ ಆದ ಹೋಮ್ ಲೋನ್‌ಗಳನ್ನು ಕೂಡ ಪಡೆಯಬಹುದು.
ಪ್ರಸ್ತುತ ಹಣಕಾಸು ವ್ಯವಸ್ಥೆಯಲ್ಲಿ, ಆರ್ಥಿಕತೆಗೆ ಹಲವಾರು ಹಣಕಾಸಿನ ಗುರಿಗಳನ್ನು ಸಾಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹಣ ಮಾರುಕಟ್ಟೆ ಸಾಧನವಾಗಿ ಬಳಸುತ್ತದೆ. ರೆಪೋ ದರದಲ್ಲಿನ ಯಾವುದೇ ಹೆಚ್ಚಳ ಅಥವಾ ಕಡಿಮೆ ಎಲ್ಲಾ ಹಣಕಾಸು ಸಾಲ ನೀಡುವ ಸಂಸ್ಥೆಗಳ ಆರ್‌ಒಐ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ರೆಪೋ ದರ 5.50% ಆಗಿದೆ*.
ನಮ್ಮ ಬಡ್ಡಿ ದರಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
- ಉದ್ಯೋಗ/ವೃತ್ತಿ ಪ್ರಕಾರ, ವಯಸ್ಸು, ಉದ್ಯಮ ವಿಭಾಗ ಮತ್ತು ಇತರ ವಿವರಗಳು, ನಿಮ್ಮ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಮಾಹಿತಿ ಕಂಪನಿಗಳು ('ಸಿಐಸಿ') ಒದಗಿಸಿದಂತೆ ಒಟ್ಟಾರೆ ಸಾಲದ ಮೊತ್ತ ಮತ್ತು ಮರುಪಾವತಿ ಟ್ರ್ಯಾಕ್ ರೆಕಾರ್ಡ್, ಕಂಪನಿಯಿಂದ ಸಾಲ ಪಡೆದ ಫಂಡ್‌ಗಳ ವೆಚ್ಚ, ನೀವು ನಿರ್ವಹಿಸುವ ಸಂಬಂಧಿತ ಬಿಸಿನೆಸ್ ವಿಭಾಗದಲ್ಲಿ ಕ್ರೆಡಿಟ್ ಮತ್ತು ಡೀಫಾಲ್ಟ್ ರಿಸ್ಕ್, ಇದೇ ರೀತಿಯ ಸಮಗ್ರ ಕ್ಲೈಂಟ್‌ಗಳ ಐತಿಹಾಸಿಕ ಕ್ರೆಡಿಟ್ ಕಾರ್ಯಕ್ಷಮತೆ, ಕೋರಲಾದ ಲೋನಿನ ಟಿಕೆಟ್ ಗಾತ್ರ/ಪ್ರಮಾಣ, ಲೋನ್‌ನ ಕಾಲಾವಧಿ, ಪ್ರದೇಶದಲ್ಲಿ ಸಾಲ ಪಾವತಿಸದಿರುವ ಮಟ್ಟ ಮತ್ತು ಸಂಗ್ರಹ ಕಾರ್ಯಕ್ಷಮತೆ, ಬಿಎಚ್‌ಎಫ್‌ಎಲ್‌ನೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಸಂಬಂಧ ಮತ್ತು ಮರುಪಾವತಿ ಇತಿಹಾಸ, ನಿಮ್ಮ ಘೋಷಿತ ಮತ್ತು ಪರಿಶೀಲಿಸಿದ ಆದಾಯ, ಸಾಲಗಾರರ ಗುಂಪಿನ ಹಣಕಾಸಿನ ಶಕ್ತಿ, ಪ್ರಾಥಮಿಕ ಅಡಮಾನ ಭದ್ರತೆಯ ಸ್ವರೂಪ ಮತ್ತು ಮೌಲ್ಯ ಇತ್ಯಾದಿಗಳನ್ನು ಒಳಗೊಂಡಿರುವ ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದ ಹಲವಾರು ಅಂಶಗಳನ್ನು ಪರಿಗಣಿಸಿ ಪ್ರತಿ ಲೋನ್‌ಗೆ ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ. ಮೇಲೆ ತಿಳಿಸಲಾದ ವೇರಿಯೆಬಲ್‌ಗಳನ್ನು ಮೌಲ್ಯಮಾಪನ ಮತ್ತು ರಿಸ್ಕ್ ಗ್ರೇಡೇಶನ್‌ಗಾಗಿ ಪ್ರಮುಖ ಅಂಡರ್‌ರೈಟಿಂಗ್ ವೇರಿಯೆಬಲ್‌ಗಳಾಗಿ ಪರಿಗಣಿಸಲಾಗುತ್ತದೆ. ಮೇಲೆ ತಿಳಿಸಿದವು ಕ್ರಿಯಾತ್ಮಕವಾಗಿದೆ ಮತ್ತು ಹಿಂದಿನ ಪೋರ್ಟ್‌ಫೋಲಿಯೋದ ಅಸ್ತಿತ್ವ ಮತ್ತು ಕಾರ್ಯಕ್ಷಮತೆಯ ಪ್ರಕಾರ ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ, ಆದ್ದರಿಂದ ಬದಲಾವಣೆಗೆ ಒಳಪಟ್ಟಿರುತ್ತದೆ.
- ಗುತ್ತಿಗೆ ಬಾಡಿಗೆ ರಿಯಾಯಿತಿ ಲೋನ್‌ಗಳು
- ಬಿಸಿನೆಸ್ ಉದ್ದೇಶಕ್ಕಾಗಿ ಪಡೆದ ಯಾವುದೇ ಆಸ್ತಿಯ ಮೇಲಿನ ಲೋನ್‌ಗಳು, ಅಂದರೆ, ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಸ್ವತ್ತುಗಳ ಸ್ವಾಧೀನ ಅಥವಾ ಹಣದ ಯಾವುದೇ ರೀತಿಯ ಅಂತಿಮ ಬಳಕೆ.
- ವಸತಿಯೇತರ ಆಸ್ತಿಗಳನ್ನು ಖರೀದಿಸಲು ಲೋನ್.
- ವಸತಿಯೇತರ ಆಸ್ತಿಯ ಭದ್ರತೆಯ ಮೇಲೆ ಲೋನ್.
- ಬಿಸಿನೆಸ್ ಉದ್ದೇಶಕ್ಕಾಗಿ ಟಾಪ್ ಅಪ್ ಲೋನ್‌ಗಳು, ಅಂದರೆ, ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಸ್ವತ್ತುಗಳ ಸ್ವಾಧೀನ ಅಥವಾ ಹಣದ ಯಾವುದೇ ರೀತಿಯ ಅಂತಿಮ ಬಳಕೆ.
ಇತರೆ ಶುಲ್ಕಗಳು ಮತ್ತು ಫೀಗಳು
ಶುಲ್ಕದ ವಿಧ | ಶುಲ್ಕಗಳು ಅನ್ವಯ |
---|---|
ಪ್ರಕ್ರಿಯಾ ಶುಲ್ಕ | ಲೋನ್ ಮೊತ್ತದ 4% ವರೆಗೆ + ಅನ್ವಯವಾಗುವ ಜಿಎಸ್‌ಟಿ |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ಶೂನ್ಯ |
ಬಡ್ಡಿ ಮತ್ತು ಅಸಲು ಸ್ಟೇಟ್‌ಮೆಂಟ್ ಶುಲ್ಕಗಳು | ಶೂನ್ಯ |
ಇಎಮ್‌ಐ ಬೌನ್ಸ್ ಶುಲ್ಕಗಳು | ಪೂರ್ಣ ವಿಭಜಿತ ವಿವರಕ್ಕಾಗಿ ಕೆಳಗೆ ಒದಗಿಸಲಾದ ಟೇಬಲ್ ನೋಡಿ |
ಪೆನಲ್ ಶುಲ್ಕಗಳು | ದಂಡ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ |
ಇಎಮ್‌ಐ ಬೌನ್ಸ್ ಶುಲ್ಕಗಳು
ಲೋನ್ ಮೊತ್ತ | ಶುಲ್ಕಗಳು |
---|---|
₹ 15 ಲಕ್ಷದವರೆಗೆ | ರೂ. 500 |
ರೂ. 15 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 30 ಲಕ್ಷದವರೆಗೆ | ರೂ. 500 |
ರೂ. 30 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 50 ಲಕ್ಷದವರೆಗೆ | ರೂ. 1,000 |
ರೂ. 50 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 1 ಕೋಟಿಯವರೆಗೆ | ರೂ. 1,000 |
ರೂ. 1 ಕೋಟಿಗಿಂತ ಹೆಚ್ಚು ಮತ್ತು ರೂ. 5 ಕೋಟಿಯವರೆಗೆ | ರೂ. 3,000 |
ರೂ. 5 ಕೋಟಿಗಿಂತ ಹೆಚ್ಚು ಮತ್ತು ರೂ. 10 ಕೋಟಿಯವರೆಗೆ | ರೂ. 3,000 |
ರೂ. 10 ಕೋಟಿಗಿಂತ ಹೆಚ್ಚು | ರೂ. 10,000 |
ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕಗಳು
ಫ್ಲೋಟಿಂಗ್ ಬಡ್ಡಿ ದರಗಳಿಗೆ ಲಿಂಕ್ ಆಗಿರುವ ಹೋಮ್ ಲೋನ್‌ಗಳನ್ನು ಹೊಂದಿರುವ ವ್ಯಕ್ತಿಗಳು ಹೌಸಿಂಗ್ ಲೋನ್ ಮೊತ್ತದ ಮುಂಪಾವತಿ ಅಥವಾ ಫೋರ್‌ಕ್ಲೋಸರ್ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸುವುದಿಲ್ಲ. ಆದಾಗ್ಯೂ, ಬಿಸಿನೆಸ್ ಉದ್ದೇಶಗಳಿಗಾಗಿ ಲೋನ್‌ಗಳನ್ನು ಹೊಂದಿರುವ ವೈಯಕ್ತಿಕ ಸಾಲಗಾರರು ಮತ್ತು ವೈಯಕ್ತಿಕವಲ್ಲದ ಸಾಲಗಾರರಿಗೆ ಇದು ಬದಲಾಗಬಹುದು.
ಬಿಸಿನೆಸ್ ಅಲ್ಲದ ಉದ್ದೇಶಗಳಿಗಾಗಿ ಫ್ಲೋಟಿಂಗ್ ಬಡ್ಡಿ ದರದ ಲೋನ್‌ಗಳೊಂದಿಗೆ ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಸಾಲಗಾರರಿಗೆ:
ವಿವರಗಳು | ಟರ್ಮ್ ಲೋನ್ | ಫ್ಲೆಕ್ಸಿ ಟರ್ಮ್ ಲೋನ್ | ಫ್ಲೆಕ್ಸಿ ಹೈಬ್ರಿಡ್ ಲೋನ್ |
---|---|---|---|
ಪೂರ್ವಪಾವತಿ ಶುಲ್ಕಗಳು | ಶೂನ್ಯ | ಶೂನ್ಯ | ಶೂನ್ಯ |
ಪೂರ್ತಿ ಮುಂಪಾವತಿ ಶುಲ್ಕಗಳು | ಶೂನ್ಯ | ಶೂನ್ಯ | ಶೂನ್ಯ |
ಬಿಸಿನೆಸ್ ಉದ್ದೇಶಗಳಿಗಾಗಿ ಫ್ಲೋಟಿಂಗ್ ಬಡ್ಡಿ ದರದ ಲೋನ್‌ಗಳೊಂದಿಗೆ ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಸಾಲಗಾರರಿಗೆ ಮತ್ತು ಫಿಕ್ಸೆಡ್ ಬಡ್ಡಿ ದರ** ಲೋನ್‌ಗಳೊಂದಿಗೆ ಎಲ್ಲಾ ಸಾಲಗಾರರಿಗೆ:
ವಿವರಗಳು | ಟರ್ಮ್ ಲೋನ್ | ಫ್ಲೆಕ್ಸಿ ಟರ್ಮ್ ಲೋನ್ | ಫ್ಲೆಕ್ಸಿ ಹೈಬ್ರಿಡ್ ಲೋನ್ |
---|---|---|---|
ಭಾಗಶಃ ಮುಂಪಾವತಿ ಶುಲ್ಕಗಳು | ಭಾಗಶಃ ಪಾವತಿ ಮೊತ್ತದ ಮೇಲೆ 2% | ಶೂನ್ಯ | ಶೂನ್ಯ |
ಪೂರ್ತಿ ಮುಂಪಾವತಿ ಶುಲ್ಕಗಳು | ಬಾಕಿ ಅಸಲಿನ ಮೇಲೆ 4% | ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿಯ ಮೇಲೆ 4% | ಫ್ಲೆಕ್ಸಿ ಲೋನ್ ಬಡ್ಡಿ ಮಾತ್ರ ಮರುಪಾವತಿ ಅವಧಿಯಲ್ಲಿ ಮಂಜೂರಾದ ಮೊತ್ತದ ಮೇಲೆ 4%*; ಮತ್ತು ಫ್ಲೆಕ್ಸಿ ಟರ್ಮ್ ಲೋನ್ ಅವಧಿಯಲ್ಲಿ ಲಭ್ಯವಿರುವ ಫ್ಲೆಕ್ಸಿ ಲೋನ್ ಮಿತಿಯ ಮೇಲೆ 4% |
*ಪೂರ್ವಪಾವತಿ ಶುಲ್ಕಗಳ ಜೊತೆಗೆ ಅನ್ವಯವಾಗುವ ಜಿಎಸ್‌ಟಿ ಯನ್ನು ಸಾಲಗಾರರು ಪಾವತಿಸಬೇಕಾಗುತ್ತದೆ, ಯಾವುದಾದರೂ ಇದ್ದರೆ.
**ಸಾಲಗಾರರು ತಮ್ಮ ಸ್ವಂತ ಮೂಲಗಳಿಂದ ಮುಚ್ಚಿದ ಹೋಮ್ ಲೋನ್‌ಗಳಿಗೆ ಶೂನ್ಯ. ಸ್ವಂತ ಮೂಲಗಳು ಎಂದರೆ ಬ್ಯಾಂಕ್/ಎನ್‌ಬಿಎಫ್‌ಸಿ/ಎಚ್ಎಫ್‌ಸಿ ಮತ್ತು/ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಇತರೆ ಯಾವುದೇ ಮೂಲವನ್ನು ಸೂಚಿಸುತ್ತದೆ.
ಗಮನಿಸಿ: ಡ್ಯುಯಲ್-ದರದ ಹೋಮ್ ಲೋನ್‌ಗಳ ಸಂದರ್ಭದಲ್ಲಿ (ಆರಂಭಿಕ ಅವಧಿಗೆ ಫಿಕ್ಸೆಡ್ ಮತ್ತು ನಂತರ ಫ್ಲೋಟಿಂಗ್), ಫೋರ್‌ಕ್ಲೋಸರ್/ಭಾಗಶಃ-ಮುಂಗಡ ಪಾವತಿ ದಿನಾಂಕದ ಪ್ರಕಾರ ಲೋನಿನ ಸ್ಥಿತಿಯ ಪ್ರಕಾರ ಫೋರ್‌ಕ್ಲೋಸರ್/ಭಾಗಶಃ-ಮುಂಗಡ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ.
ಲೋನ್ ಉದ್ದೇಶ
ಈ ಕೆಳಗಿನ ಲೋನ್‌ಗಳನ್ನು ಬಿಸಿನೆಸ್ ಉದ್ದೇಶಕ್ಕಾಗಿ ಲೋನ್‌ಗಳು ಎಂದು ವರ್ಗೀಕರಿಸಲಾಗುತ್ತದೆ:
ಹೋಮ್ ಲೋನ್ ಮತ್ತು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಡುವಿನ ವ್ಯತ್ಯಾಸಗಳು
ಹೋಮ್ ಲೋನ್ ಎಂಬುದು ಆಸ್ತಿಯನ್ನು ಖರೀದಿಸಲು ಪಡೆದ ಲೋನ್ ಆಗಿದೆ. ಅನುಕೂಲಕರ ನಿಯಮಗಳಲ್ಲಿ ಹೋಮ್ ಲೋನಿಗೆ ಅನುಮೋದನೆ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು, ನೀವು ನಮ್ಮ ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಕೆಲವು ಡಾಕ್ಯುಮೆಂಟೇಶನ್ ಒದಗಿಸಬೇಕು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಒಂದು ರಿಫೈನಾನ್ಸಿಂಗ್ ಆಯ್ಕೆಯಾಗಿದ್ದು, ಇದು ಉತ್ತಮ ಲೋನ್ ನಿಯಮಗಳಿಗಾಗಿ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಲು ನಿಮಗೆ ಅನುಮತಿ ನೀಡುತ್ತದೆ. ಹೆಚ್ಚುವರಿಯಾಗಿ, ಇತರ ಹೌಸಿಂಗ್ ಫೈನಾನ್ಸ್‌ಗಳಿಗೆ ಹಣಕಾಸು ಒದಗಿಸಲು ಬ್ಯಾಲೆನ್ಸ್ ಟ್ರಾನ್ಸ್‌ಫರ್‌ನೊಂದಿಗೆ ನೀವು ಟಾಪ್-ಅಪ್ ಲೋನನ್ನು ಕೂಡ ಪಡೆಯಬಹುದು.
ಹೌಸಿಂಗ್ ಲೋನ್ ಮತ್ತು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಸ್ತಿ ಖರೀದಿಗೆ ಹಣಕಾಸು ಒದಗಿಸುವ ಅದೇ ಉದ್ದೇಶವನ್ನು ಪೂರೈಸಿದರೂ, ಅವುಗಳು ಇನ್ನೂ ಕೆಲವು ವ್ಯತ್ಯಾಸಗಳನ್ನು ಹೊಂದಿವೆ. ಉದಾಹರಣೆಗೆ, ಹೌಸಿಂಗ್ ಲೋನಿಗೆ ಆಸ್ತಿ ಮೌಲ್ಯಮಾಪನದ ಅಗತ್ಯವಿದೆ ಮತ್ತು ಈ ವಿಷಯದಲ್ಲಿ, ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸುಲಭವಾಗಿರಬಹುದು. ಆದರೆ ಹೌಸಿಂಗ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ನೀವು ವಿಳಾಸ, ವಯಸ್ಸು ಮತ್ತು ಆದಾಯ ಪುರಾವೆಗಳಂತಹ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ನಿಮ್ಮ ಒಟ್ಟು ಬಡ್ಡಿಯ ಹೊರಹೋಗುವಿಕೆಯ ಮೇಲೆ ಹೆಚ್ಚು ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುವ ಹೆಚ್ಚಿನ ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರ ಕ್ಕಾಗಿ ನೀವು ನಿಮ್ಮ ಹೋಮ್ ಲೋನನ್ನು ಟ್ರಾನ್ಸ್‌ಫರ್ ಮಾಡಬಹುದು. ಆದಾಗ್ಯೂ, ಆರಂಭಿಕ ಹೋಮ್ ಲೋನಿನ ಮುಖ್ಯ ಉದ್ದೇಶವೆಂದರೆ ವಸತಿ ಆಸ್ತಿಯ ಖರೀದಿ ಅಥವಾ ನವೀಕರಣಕ್ಕೆ ಹಣಕಾಸು ಒದಗಿಸುವುದು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅನ್ನು ಯಾವಾಗ ಪರಿಗಣಿಸಬೇಕು?
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಯೋಜನಕಾರಿಯಾಗಬಹುದಾದ ಕೆಲವು ಸನ್ನಿವೇಶಗಳು ಇಲ್ಲಿವೆ:
-
ಕಡಿಮೆ ಬಡ್ಡಿ ದರ:
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪಡೆಯುವುದರಿಂದ ಹೆಚ್ಚು ಅನುಕೂಲಕರ ಬಡ್ಡಿ ದರವನ್ನು ಸಮಾಲೋಚಿಸುವ ಅವಕಾಶದ ಅನುಮತಿ ನಿಮಗೆ ದೊರೆಯುತ್ತದೆ. -
ಬದಲಾದ ಮರುಪಾವತಿ ಅವಧಿ:
ನೀವು ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಿದಾಗ, ಅರ್ಹತೆಗೆ ಒಳಪಟ್ಟು, ನೀವು ಕಡಿಮೆ ಅಥವಾ ದೀರ್ಘ ಮರುಪಾವತಿ ಅವಧಿಯನ್ನು ಪಡೆಯಬಹುದು. -
ಹೆಚ್ಚುವರಿ ಫಂಡ್‌ಗಳ ಅಗತ್ಯವಿದ್ದಾಗ:
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪಡೆಯುವಾಗ, ಟಾಪ್-ಅಪ್ ಲೋನ್ ಮೂಲಕ ಹೆಚ್ಚುವರಿ ಹಣಕಾಸನ್ನು ಪಡೆಯುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ಈ ಮೊತ್ತವು ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿಯೊಂದಿಗೆ ಬರುತ್ತದೆ ಮತ್ತು ಯಾವುದೇ ವಸತಿ ಸಂಬಂಧಿತ ವೆಚ್ಚಕ್ಕಾಗಿ ಬಳಸಬಹುದು.
ಬ್ಯಾಲೆನ್ಸ್ ಟ್ರಾನ್ಸ್‌ಫರ್ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ, ಸಾಲಗಾರರು ಸಂಭಾವ್ಯ ಉಳಿತಾಯವನ್ನು ಲೆಕ್ಕ ಹಾಕಬೇಕು ಮತ್ತು ಎಲ್ಲಾ ಒಳಗೊಂಡಿರುವ ವೆಚ್ಚಗಳನ್ನು ಪರಿಗಣಿಸಬೇಕು.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್: ಎಫ್ಎಕ್ಯೂಗಳು
ಒಂದು ಸಾಲದಾತರಿಂದ ಇನ್ನೊಂದಕ್ಕೆ ನೀವು ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ವರ್ಗಾಯಿಸುವುದು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯಾಗಿದೆ. ಕಡಿಮೆ ಬಡ್ಡಿ ದರಗಳು, ಹೆಚ್ಚು ಪಾಕೆಟ್-ಫ್ರೆಂಡ್ಲಿ ನಿಯಮಗಳು ಮತ್ತು ಮನೆ ನವೀಕರಣದಂತಹ ಇತರ ವಸತಿ ವೆಚ್ಚಗಳಿಗೆ ಟಾಪ್-ಅಪ್ ಲೋನನ್ನು ಪಡೆಯಲು ಈ ಫೀಚರ್ ನಿಮಗೆ ಸಹಾಯ ಮಾಡುತ್ತದೆ.
ಹೋಮ್ ಲೋನ್ ಟಾಪ್-ಅಪ್ ಅಥವಾ ಕೇವಲ ಟಾಪ್-ಅಪ್ ಲೋನ್ ಎಂದರೆ ನೀವು ನಿಮ್ಮ ಹೋಮ್ ಲೋನನ್ನು ಹೊಸ ಸಾಲದಾತರಿಗೆ ಟ್ರಾನ್ಸ್‌ಫರ್ ಮಾಡುವಾಗ ನೀವು ಪಡೆಯಬಹುದಾದ ಹೆಚ್ಚುವರಿ ಲೋನ್ ಆಗಿದೆ. ನಿಮ್ಮ ಪ್ರಸ್ತುತ ಹೋಮ್ ಲೋನನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡುವ ಮೂಲಕ ಟಾಪ್-ಅಪ್ ಲೋನ್ ಆಗಿ ದೊಡ್ಡ ಮೊತ್ತವನ್ನು ಪಡೆಯಿರಿ. ಮೊತ್ತವು ಫ್ಲೆಕ್ಸಿಬಲ್ ಅಂತಿಮ ಬಳಕೆ, ಸ್ಪರ್ಧಾತ್ಮಕ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯನ್ನು ಹೊಂದಿದೆ.
ಹೌದು, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಉತ್ತಮ ಕಲ್ಪನೆಯಾಗಿದೆ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಲೋನಿಗಿಂತ ಉತ್ತಮ ಬಡ್ಡಿ ದರಗಳಲ್ಲಿ ಹೊಸ ಹೋಮ್ ಲೋನನ್ನು ಪಡೆಯಬಹುದು. ಇದು ಒಟ್ಟು ಬಡ್ಡಿಯ ಹೊರಹೋಗುವಿಕೆಯ ಮೇಲೆ ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಹೋಮ್ ಲೋನ್ ರಿಫೈನಾನ್ಸ್ ಮಾಡುವುದರಿಂದ ಟಾಪ್-ಅಪ್ ಲೋನ್, ಕಡಿಮೆ ಬಡ್ಡಿ ದರಗಳು ಮತ್ತು ದೀರ್ಘ ಮರುಪಾವತಿ ಅವಧಿಯಂತಹ ಹಲವಾರು ಪ್ರಯೋಜನಗಳು ನಿಮಗೆ ಸಿಗುತ್ತವೆ.
ಹೊಸ ಸಾಲದಾತರ ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ವೇತನದಾರ ಅಥವಾ ಸ್ವಯಂ ಉದ್ಯೋಗಿ ಸಾಲಗಾರರು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯನ್ನು ಪಡೆಯಬಹುದು. ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನಿಗೆ, ಅಸ್ತಿತ್ವದಲ್ಲಿರುವ ಸಾಲದಾತರೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಲೋನಿನಲ್ಲಿ ಅವಧಿ ಮೀರಿದ ಬಾಕಿಗಳನ್ನು ನೀವು ಹೊಂದಿರಬಾರದು. ಸ್ಪರ್ಧಾತ್ಮಕ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಡ್ಡಿ ದರವನ್ನು ಪಡೆಯಲು ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಸಂಪರ್ಕ ಸಾಧಿಸಿ.
ಬಜಾಜ್ ಹೌಸಿಂಗ್ ಫೈನಾನ್ಸ್ 4% ವರೆಗಿನ ನಾಮಮಾತ್ರದ ಪ್ರಕ್ರಿಯಾ ಶುಲ್ಕ + ಅನ್ವಯವಾಗುವ ಜಿಎಸ್‌ಟಿಯನ್ನು ವಿಧಿಸುತ್ತದೆ.
ಕಡಿಮೆ ಬಡ್ಡಿ ದರ, ನಿರ್ವಹಿಸಬಹುದಾದ ಇಎಂಐಗಳು, ದೀರ್ಘ ಲೋನ್ ಕಾಲಾವಧಿ ಮತ್ತು ಹೌಸಿಂಗ್ ವೆಚ್ಚಗಳಿಗಾಗಿ ಟಾಪ್-ಅಪ್ ಲೋನ್‌ನ ಪ್ರಯೋಜನಗಳನ್ನು ಆನಂದಿಸಲು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪಡೆಯಿರಿ. ನಿಮಗೆ ಆಕರ್ಷಕ ಮುಂಚಿತ-ಅರ್ಹ ಆಫರ್‌ಗಳನ್ನು ನೀಡಲಾಗಿದ್ದರೆ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡುವುದನ್ನು ಕೂಡ ನೀವು ಪರಿಗಣಿಸಬಹುದು.
ನಿಮ್ಮ ಉಳಿತಾಯವು ಪ್ರಕ್ರಿಯೆ ಮತ್ತು ಡಾಕ್ಯುಮೆಂಟೇಶನ್ ಶುಲ್ಕಗಳಂತಹ ಇತರ ಶುಲ್ಕಗಳನ್ನು ಮೀರಿದಾಗ ಮಾತ್ರ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪಡೆಯಿರಿ. ಅಲ್ಲದೆ, ಆರಂಭಿಕ ಮರುಪಾವತಿ ಅವಧಿಯಲ್ಲಿಯೇ ಲೋನ್ ಟ್ರಾನ್ಸ್‌ಫರ್ ಮಾಡುವುದನ್ನು ಪರಿಗಣಿಸಿ. ಏಕೆಂದರೆ ಹೆಚ್ಚಿನ ಇಎಂಐ ಮೊತ್ತವನ್ನು ಬಡ್ಡಿಗಾಗಿ ಪಾವತಿಸುವ ಅವಧಿ ಇದಾಗಿದೆ.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವಾಗ ಯಾವುದೇ ಮಿತಿಯಿಲ್ಲ. ನಿಮಗೆ ನೀಡಲಾಗುವ ಲೋನ್ ಮೊತ್ತವು ನಿಮ್ಮ ಪ್ರೊಫೈಲ್ ಮತ್ತು ಪ್ರಶ್ನೆಯಲ್ಲಿರುವ ಆಸ್ತಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ ಮತ್ತು ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿಯೊಂದಿಗೆ ಗಣನೀಯ ಟಾಪ್-ಅಪ್ ಲೋನ್ ಪಡೆಯಿರಿ.
ಸಾಮಾನ್ಯವಾಗಿ, ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡಲು 5 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಕಾಲಾವಧಿಯು ನೀವು ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರಿಂದ ಫೋರ್‌ಕ್ಲೋಸರ್ ಪತ್ರ ಮತ್ತು ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಎಷ್ಟು ತ್ವರಿತವಾಗಿ ಪಡೆಯುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ.
ಹೌದು, ನೀವು ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ದೊಡ್ಡ ಟಾಪ್-ಅಪ್ ಲೋನನ್ನು ಪಡೆಯಬಹುದು, ಅರ್ಹತೆಯ ಆಧಾರದ ಮೇಲೆ, ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನಿನೊಂದಿಗೆ ಹೌಸಿಂಗ್ ಸಂಬಂಧಿತ ಹಣಕಾಸಿನ ಅವಶ್ಯಕತೆಗಳ ಶ್ರೇಣಿಯನ್ನು ಪೂರೈಸಬಹುದು. ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ಫ್ಲೆಕ್ಸಿಬಲ್ ಮರುಪಾವತಿ ಅವಧಿಯೊಂದಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ ಲೋನ್ ಪಡೆಯಿರಿ.
ನೀವು ಪ್ರಕ್ರಿಯೆಯನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಆಧಾರದ ಮೇಲೆ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಸಕಾರಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಬಹುದು. ಕೆಲವು ಸಂಭವನೀಯ ಪರಿಣಾಮಗಳು ಇಲ್ಲಿವೆ:
ಸಕಾರಾತ್ಮಕ ಪರಿಣಾಮಗಳು: ಮೊದಲು, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಿಮ್ಮ ಲೋನ್ ಮೊತ್ತದ ಬ್ಯಾಲೆನ್ಸ್ ಅನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಸುಧಾರಿಸಬಹುದು, ಇದು ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ. ಎರಡನೆಯದಾಗಿ, ನೀವು ನಿಮ್ಮ ಹೋಮ್ ಲೋನನ್ನು ಕಡಿಮೆ ಬಡ್ಡಿ ದರ ನೀಡುವ ಸಾಲದಾತರಿಗೆ ಟ್ರಾನ್ಸ್‌ಫರ್ ಮಾಡಿದರೆ, ಬಡ್ಡಿ ಶುಲ್ಕಗಳ ಮೇಲೆ ಹಣವನ್ನು ಉಳಿಸಲು ನಿಮಗೆ ಸಾಧ್ಯವಾಗಬಹುದು, ಇದು ನಿಮ್ಮ ಲೋನನ್ನು ವೇಗವಾಗಿ ಪಾವತಿಸಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಹಾಯ ಮಾಡುತ್ತದೆ. ಮೂರನೆಯದಾಗಿ, ನೀವು ನಿಮ್ಮ ಹೋಮ್ ಲೋನನ್ನು ಮರುಪಾವತಿಸಲು ಕಷ್ಟಪಡುತ್ತಿದ್ದರೆ, ಉತ್ತಮ ಮರುಪಾವತಿ ನಿಯಮಗಳನ್ನು ಒದಗಿಸುವ ಸಾಲದಾತರಿಗೆ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡುವುದರಿಂದ ನಿಮ್ಮ ಲೋನ್ ಜವಾಬ್ದಾರಿಯನ್ನು ಕಡಿಮೆ ಮಾಡಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಋಣಾತ್ಮಕ ಪರಿಣಾಮಗಳು: ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡುವುದರಿಂದ ನಿಮ್ಮ ಕ್ರೆಡಿಟ್ ವರದಿಯ ಕಠಿಣ ವಿಚಾರಣೆಗೆ ಕಾರಣವಾಗುತ್ತದೆ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಅನೇಕ ಬಾರಿ ಬಳಸಲು ಸಾಧ್ಯವಾದರೂ, ಪ್ರಕ್ರಿಯಾ ಶುಲ್ಕವನ್ನು ಅನೇಕ ಬಾರಿ ಪಾವತಿಸುವುದರಿಂದ ಅದನ್ನು ಕಾರ್ಯಸಾಧ್ಯವಾದ ಆಯ್ಕೆಯಾಗದಿರಿಸಬಹುದು.
ಹೌದು, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅರ್ಜಿದಾರರು ಸೆಕ್ಷನ್ 80ಸಿ, 24(ಬಿ), ಮತ್ತು 80ಇಇ ಅಡಿಯಲ್ಲಿ ಹಳೆಯ ತೆರಿಗೆ ವ್ಯವಸ್ಥೆಯ ಪ್ರಕಾರ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಸಂಬಂಧಿತ ಲೇಖನಗಳು
ಇದು ಕೂಡ ಜನರ ಪರಿಗಣನೆಗೆ




