ಹೋಮ್ ಲೋನ್ ಎಫ್ಎಕ್ಯೂಗಳು
ಹೋಮ್ ಲೋನ್ EMI ಮೊತ್ತವನ್ನು ಮೂರು ಪ್ರಮುಖ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ:
-
ಹೋಮ್ ಲೋನ್ ಅಸಲು ಮೊತ್ತ: ಇದು ಮಂಜೂರಾದ ಹೋಮ್ ಲೋನ್ ಮೊತ್ತವಾಗಿದ್ದು, ನಿಮ್ಮ EMI ಮೊತ್ತದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಹೋಮ್ ಲೋನ್ ಮೊತ್ತ ಹೆಚ್ಚಿದ್ದಷ್ಟೂ, ನಿಮ್ಮ EMI ಹೆಚ್ಚಾಗುತ್ತದೆ.
-
ಹೋಮ್ ಲೋನ್ ಬಡ್ಡಿ ದರ: ಹೋಮ್ ಲೋನ್ ಬಡ್ಡಿ ದರ ಎಂಬುದು ಅಸಲು ಮೊತ್ತದ ಮೇಲೆ ಸಾಲದಾತರು ವಿಧಿಸುವ ಶೇಕಡಾವಾರು ಆಗಿದೆ. ಸ್ವಾಭಾವಿಕವಾಗಿ, ಹೆಚ್ಚಿನ ಬಡ್ಡಿ ದರವು ಹೆಚ್ಚಿನ EMI ಮೊತ್ತಕ್ಕೆ ಕಾರಣವಾಗುತ್ತದೆ.
-
ಹೋಮ್ ಲೋನ್ ಮರುಪಾವತಿ ಅವಧಿ: ಮರುಪಾವತಿ ಅವಧಿಯು ನಿಮ್ಮ ಹೋಮ್ ಲೋನ್ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಲು ನೀವು ತೆಗೆದುಕೊಳ್ಳಬಹುದಾದ ಒಟ್ಟು ಸಮಯವಾಗಿದೆ. ದೀರ್ಘಾವಧಿಯು ಇಎಂಐಗಳನ್ನು ಸಣ್ಣದಾಗಿಸುವ ಮೂಲಕ ಸಾಲ ನಿರ್ವಹಣೆಯನ್ನು ಸುಲಭಗೊಳಿಸಬಹುದು ಆದರೆ ಇದು ನಿಮ್ಮ ಒಟ್ಟು ಸಾಲದ ವೆಚ್ಚವನ್ನು ಹೆಚ್ಚಿಸಬಹುದು.
ನೀವು ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ನಿಮ್ಮ ಇಎಂಐ ಮೊತ್ತವನ್ನು ಪೂರ್ವಭಾವಿಯಾಗಿ ಲೆಕ್ಕ ಹಾಕಲು ನೀವು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಹೌದು, ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಸಾಲಗಾರರಿಗೆ ಶೆಡ್ಯೂಲ್ ಮುಂಚಿತವಾಗಿ ಲೋನನ್ನು ಮರುಪಾವತಿಸಲು ಅವಕಾಶ ನೀಡುತ್ತದೆ. ಇದನ್ನು ಮಾಡಲು ಪರಿಗಣಿಸಬಹುದಾದ ಎರಡು ವಿಧಾನಗಳು ಇಲ್ಲಿವೆ:
- ಭಾಗಶಃ-ಮುಂಪಾವತಿ: ನಿಮ್ಮ ಹೋಮ್ ಲೋನ್ ಮೇಲೆ ಭಾಗಶಃ-ಮುಂಪಾವತಿಗಳನ್ನು ಮಾಡುವ ಮೂಲಕ, ನಿಮ್ಮ ನಿಯಮಿತ EMI ಪಾವತಿಗಳ ಮೇಲೆ ನೀವು ಒಟ್ಟು ಮೊತ್ತದ ಪಾವತಿಗಳನ್ನು ಮಾಡಬಹುದು ಮತ್ತು ನಿಮ್ಮ ಮರುಪಾವತಿ ಶೆಡ್ಯೂಲ್‌ಗಿಂತ ಮೊದಲು ಬಾಕಿ ಉಳಿದ ಲೋನ್ ಮೊತ್ತವನ್ನು ಕಡಿಮೆ ಮಾಡಬಹುದು.
- ಫೋರ್‌ಕ್ಲೋಸರ್: ನಿಮ್ಮ ಹೋಮ್ ಲೋನ್ ಅನ್ನು ಫೋರ್‌ಕ್ಲೋಸ್ ಮಾಡುವ ಮೂಲಕ, ನಿಮ್ಮ ಮರುಪಾವತಿ ಅವಧಿ ಮುಗಿಯುವ ಮೊದಲು, ನೀವು ಒಂದೇ ಬಾರಿಗೆ ಪೂರ್ಣ ಬಾಕಿ ಮೊತ್ತವನ್ನು ಮರುಪಾವತಿಸುತ್ತೀರಿ.
ಹೌದು, ನೀವು ಮತ್ತು ನಿಮ್ಮ ಸಂಗಾತಿಯು ನಿಮ್ಮ ಹೋಮ್ ಲೋನಿಗೆ ಜಂಟಿ ಹಣಕಾಸಿನ ಅರ್ಜಿದಾರರಾಗಬಹುದು. ಜಂಟಿ ಹೋಮ್ ಲೋನ್‌ಗೆ ಅಪ್ಲೈ ಮಾಡುವಲ್ಲಿ ಹಲವಾರು ಪ್ರಯೋಜನಗಳಿವೆ, ಅವುಗಳಲ್ಲಿ ಕೆಲವೆಂದರೆ:
- ವರ್ಧಿತ ಹೋಮ್ ಲೋನ್ ಅರ್ಹತೆ
- ಆದಾಯ ತೆರಿಗೆ ಉಳಿತಾಯಗಳು
- ವರ್ಧಿತ ಹೋಮ್ ಲೋನ್ ಮರುಪಾವತಿಯ ಸುಲಭ ಸೌಲಭ್ಯ
ಹಣಕಾಸಿನ ಸಹ-ಅರ್ಜಿದಾರರನ್ನು ಹೊಂದಿರುವುದರಿಂದ ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಬಲಪಡಿಸಬಹುದು, ಏಕೆಂದರೆ ಇದು ನಿಮ್ಮ ಲೋನ್ ಅರ್ಹತೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅರ್ಹತಾ ಮಾನದಂಡಗಳನ್ನು ವೈಯಕ್ತಿಕವಾಗಿ ಪೂರೈಸದಿರುವ ಅರ್ಜಿದಾರರು ಹೆಚ್ಚಿನ ಲೋನ್ ಮೊತ್ತಕ್ಕೆ ತಮ್ಮ ಅರ್ಹತೆಯನ್ನು ಸುಧಾರಿಸಲು ಹಣಕಾಸಿನ ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಬಹುದು.
ಬಜಾಜ್ ಹೌಸಿಂಗ್ ಫೈನಾನ್ಸ್ ಸಾಲಗಾರರಿಗೆ ತಮ್ಮ ಅರ್ಹತೆಯ ಆಧಾರದ ಮೇಲೆ 32 ವರ್ಷಗಳವರೆಗೆ ವಿಸ್ತರಿಸಬಹುದಾದ ಮರುಪಾವತಿ ಅವಧಿಯೊಂದಿಗೆ ತಮ್ಮ ಸ್ವಂತ ವೇಗದಲ್ಲಿ ಹೋಮ್ ಲೋನ್‌ಗಳನ್ನು ಮರುಪಾವತಿಸಲು ಅನುಮತಿಸುತ್ತದೆ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಇದು ಕೂಡ ಜನರ ಪರಿಗಣನೆಗೆ


