ರೂ. 30 ಲಕ್ಷದ ಹೋಮ್ ಲೋನ್

ವಸತಿ ಆಸ್ತಿಯನ್ನು ಖರೀದಿಸಲು ಯೋಜಿಸುವ ವ್ಯಕ್ತಿಗಳು ತಮ್ಮ ಕನಸಿನ ಮನೆಗೆ ಸುಲಭವಾಗಿ ಹಣಕಾಸು ಒದಗಿಸಲು ಹೋಮ್ ಲೋನ್ ಪಡೆಯಬಹುದು. ಬಜಾಜ್ ಹೌಸಿಂಗ್ ಫೈನಾನ್ಸ್ 32 ವರ್ಷಗಳವರೆಗಿನ ಮರುಪಾವತಿ ಅವಧಿ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ, ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ.

ನೀವು ₹30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನ್‌ಗಾಗಿ ಹುಡುಕುತ್ತಿದ್ದರೆ, ಇಂದೇ ಅಪ್ಲೈ ಮಾಡಿ ಮತ್ತು ನಮ್ಮ ಸೂಕ್ತ ಹಣಕಾಸು ಪರಿಹಾರಗಳಿಂದ ಪ್ರಯೋಜನ ಪಡೆಯಿರಿ.

ರೂ. 30 ಲಕ್ಷದ ಹೋಮ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು

ಸ್ಪರ್ದಾತ್ಮಕ ಬಡ್ಡಿದರ

ನಾವು ಸಂಬಳ ಪಡೆಯುವ, ಸ್ವಯಂ ಉದ್ಯೋಗಿ ಮತ್ತು ವೃತ್ತಿಪರ ಅರ್ಜಿದಾರರಿಗೆ ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತೇವೆ.

ಹೆಚ್ಚಿನ ಮೌಲ್ಯದ ಲೋನ್ ಮಂಜೂರಾತಿ

ನೀವು ಗಣನೀಯ ಲೋನ್ ಮೊತ್ತವನ್ನು ಪಡೆಯಬಹುದು, ಹಣಕಾಸಿನ ನಿರ್ಬಂಧಗಳಿಲ್ಲದೆ ನಿಮ್ಮ ಆದ್ಯತೆಯ ವಸತಿ ಆಸ್ತಿಗೆ ಹಣಕಾಸು ಒದಗಿಸಬಹುದು.

32 ವರ್ಷಗಳವರೆಗಿನ ದೀರ್ಘ ಮರುಪಾವತಿ ಅವಧಿ

32 ವರ್ಷಗಳವರೆಗಿನ ದೀರ್ಘ ಮರುಪಾವತಿ ಅವಧಿಯೊಂದಿಗೆ ನಿರ್ವಹಿಸಬಹುದಾದ EMI ಗಳನ್ನು ಆನಂದಿಸಿ.

ಅನುಕೂಲಕರ ಮನೆಬಾಗಿಲಿನ ಡಾಕ್ಯುಮೆಂಟ್ ಕಲೆಕ್ಷನ್

ನಿಮ್ಮ ಮನೆಯಿಂದಲೇ ಅನುಕೂಲಕರವಾಗಿ ಆನ್‌ಲೈನ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಅಥವಾ ಮನೆಬಾಗಿಲಿನ ಡಾಕ್ಯುಮೆಂಟ್ ಪಿಕಪ್ ಸೇವೆಗಳನ್ನು ಆಯ್ಕೆ ಮಾಡುವ ಮೂಲಕ ತಡೆರಹಿತ ಲೋನ್ ಪ್ರಕ್ರಿಯೆಯನ್ನು ಅನುಭವಿಸಿ.

48 ಗಂಟೆಗಳ ಒಳಗೆ ವಿತರಣೆ*

ಯಶಸ್ವಿ ಅಪ್ಲಿಕೇಶನ್ ಅನುಮೋದನೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯನ್ನು ಪೂರ್ಣಗೊಳಿಸುವುದಕ್ಕೆ ಒಳಪಟ್ಟು, ನೀವು 48 ಗಂಟೆಗಳ* ಒಳಗೆ ತ್ವರಿತ ವಿತರಣೆಯನ್ನು ನಿರೀಕ್ಷಿಸಬಹುದು.

9,800+ ಅನುಮೋದಿತ ಯೋಜನೆಗಳು

9,800+ ಅನುಮೋದಿತ ಯೋಜನೆಗಳಲ್ಲಿ ವ್ಯಾಪಕ ಶ್ರೇಣಿಯ ಆಸ್ತಿಗಳನ್ನು ಅನ್ವೇಷಿಸಿ ಮತ್ತು ಅನುಕೂಲಕರ ಸಾಲದ ನಿಯಮಗಳೊಂದಿಗೆ ವೇಗವಾದ ಪ್ರಕ್ರಿಯೆಯ ಪ್ರಯೋಜನ ಪಡೆಯಿರಿ.

ಹೋಮ್ ಲೋನ್‌ ಇಎಂಐ ಲೆಕ್ಕ ಹಾಕಿ

ಲೋನ್ ಮೊತ್ತರೂ.

ರೂ.4 ಲಕ್ಷ₹ 15 ಕೋಟಿ

ಅವಧಿವರ್ಷ

5 ವರ್ಷ32 ವರ್ಷ

ಬಡ್ಡಿ ದರ%

1%15%

ನಿಮ್ಮ ಇಎಂಐ ಮೊತ್ತ: ರೂ.0

ಒಟ್ಟು ಬಡ್ಡಿ

0.00%

ರೂ. 0.00

0.00%

ಒಟ್ಟು ಪಾವತಿಸಬೇಕಾದ ಮೊತ್ತ

ರೂ. 0.00

ಮರುಪಾವತಿ ಶೆಡ್ಯೂಲ್ ನೋಡಿ ಈಗಲೇ ಅಪ್ಲೈ ಮಾಡಿ
ಮರುಪಾವತಿ ಶೆಡ್ಯೂಲ್
ದಿನಾಂಕ
  

ರೂ. 30 ಲಕ್ಷದ ಹೋಮ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು

ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಯೋಜಿಸುತ್ತಿದ್ದೀರಾ? ತ್ವರಿತ ಪ್ರಕ್ರಿಯೆಗಾಗಿ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು*** ಸಿದ್ಧವಾಗಿರಿಸಿಕೊಳ್ಳಿ:

ಕೆಟಗರಿ ಅಗತ್ಯ ಡಾಕ್ಯುಮೆಂಟ್‌ಗಳು
ಕಡ್ಡಾಯ ಡಾಕ್ಯುಮೆಂಟ್‌ಗಳು PAN ಕಾರ್ಡ್ ಅಥವಾ ಫಾರ್ಮ್ 60
ಕೆವೈಸಿ ಡಾಕ್ಯುಮೆಂಟ್‌ಗಳು ಮಾನ್ಯ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ
ಛಾಯಾಚಿತ್ರಗಳು ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋಗಳು
ಆದಾಯ ಪುರಾವೆ - ಸಂಬಳ ಪಡೆಯುವ ಅರ್ಜಿದಾರರು ಇತ್ತೀಚಿನ ಸಂಬಳದ ಸ್ಲಿಪ್‌ಗಳು ಮತ್ತು/ಅಥವಾ ಫಾರ್ಮ್ 16
ಆದಾಯ ಪುರಾವೆ - ಸ್ವಯಂ ಉದ್ಯೋಗಿ ಅರ್ಜಿದಾರರು ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ (ITR)
ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಕಳೆದ ಆರು ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
ವ್ಯವಹಾರದ ಪುರಾವೆ ಕನಿಷ್ಠ 3 ವರ್ಷಗಳ ಹಿನ್ನೆಲೆಯೊಂದಿಗೆ ಬಿಸಿನೆಸ್ ಮುಂದುವರಿಕೆಯ ಪುರಾವೆ (ಸ್ವಯಂ ಉದ್ಯೋಗಿ ವ್ಯಕ್ತಿಗಳು/ಬಿಸಿನೆಸ್ ಮಾಲೀಕರಿಗೆ ಅನ್ವಯವಾಗುತ್ತದೆ)

***ಇದು ಸೂಚನಾತ್ಮಕ ಪಟ್ಟಿ.

ಇತ್ತೀಚೆಗೆ ಅಪ್ಡೇಟ್ ಆದವುಗಳು

₹.30 ಲಕ್ಷದ ಹೋಮ್ ಲೋನ್‌ಗೆ ಅರ್ಹತಾ ಮಾನದಂಡ

ಹೋಮ್ ಲೋನ್ ಅರ್ಹತಾ ಮಾನದಂಡವು ಅರ್ಜಿದಾರರ ಉದ್ಯೋಗ ವರ್ಗದ ಆಧಾರದ ಮೇಲೆ ಭಿನ್ನವಾಗಿರುತ್ತದೆ ಮತ್ತು ಇವುಗಳನ್ನು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವಿಭಾಗಗಳಾಗಿ ವರ್ಗೀಕರಿಸಲಾಗಿದೆ:

ಸಂಬಳ ಪಡೆಯುವ ಅರ್ಜಿದಾರರಿಗೆ ಸ್ವಯಂ ಉದ್ಯೋಗಿ ಅರ್ಜಿದಾರರಿಗೆ
ಭಾರತೀಯ ನಾಗರಿಕರಾಗಿರಬೇಕು (NRI ಗಳು ಸೇರಿದಂತೆ) ಭಾರತೀಯ ನಾಗರಿಕರಾಗಿರಬೇಕು (ನಿವಾಸಿ ಮಾತ್ರ)
ವಯಸ್ಸು 23 ಮತ್ತು 67 ವರ್ಷಗಳ ನಡುವೆ ಇರಬೇಕು** ವಯಸ್ಸು 25 ಮತ್ತು 70 ವರ್ಷಗಳ ನಡುವೆ ಇರಬೇಕು**
ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು ಕನಿಷ್ಠ 3 ವರ್ಷಗಳಿಂದ ಕಾರ್ಯಾಚರಣೆಯಲ್ಲಿರುವ ಬಿಸಿನೆಸ್ ಹೊಂದಿರಬೇಕು

**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.

ರೂ. 30 ಲಕ್ಷದ ಹೋಮ್ ಲೋನ್‌ಗಳಿಗೆ ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಹೌಸಿಂಗ್ ಫೈನಾನ್ಸ್ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ - ಅದು ರೂ. 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಲೋನ್ ಮೊತ್ತವಾಗಿರಬಹುದು. ಅರ್ಹ ಅರ್ಜಿದಾರರಿಗೆ ನಾವು ಸ್ಪರ್ಧಾತ್ಮಕ ಬಡ್ಡಿ ದರವನ್ನು ಒದಗಿಸುತ್ತೇವೆ.

ಅನ್ವಯವಾಗುವ ಇತರ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

ವಿವಿಧ ಅವಧಿಗಳಿಗೆ ರೂ. 30 ಲಕ್ಷದ ಹೋಮ್ ಲೋನ್ ಇಎಂಐ

ನೀವು ₹30 ಲಕ್ಷದ ಹೋಮ್ ಲೋನ್ ಪಡೆಯಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಮಾಸಿಕ ಕಂತುಗಳನ್ನು ಅಂದಾಜು ಮಾಡಲು ಬಯಸಿದರೆ, ತ್ವರಿತ ಮತ್ತು ನಿಖರವಾದ ಲೆಕ್ಕಾಚಾರಗಳಿಗಾಗಿ ನೀವು ನಮ್ಮ ಹೌಸಿಂಗ್ ಲೋನ್ EMI ಕ್ಯಾಲ್ಕುಲೇಟರ್ ಬಳಸಬಹುದು. ಆಯ್ಕೆ ಮಾಡಿದ ಮರುಪಾವತಿ ಅವಧಿಯ ಆಧಾರದ ಮೇಲೆ ನಿಮ್ಮ EMI ಹೇಗೆ ಬದಲಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಟೂಲ್ ನಿಮಗೆ ಸಹಾಯ ಮಾಡುತ್ತದೆ.

ವಿವಿಧ ಲೋನ್ ಅವಧಿಗಳಿಗೆ ಸೂಚನಾತ್ಮಕ EMI ಮೌಲ್ಯಗಳು ಈ ಕೆಳಗಿನಂತಿವೆ:

30 ವರ್ಷಗಳಿಗೆ ರೂ. 32 ಲಕ್ಷದ ಹೋಮ್ ಲೋನ್ ಇಎಂಐ

ಲೋನ್ ಮೊತ್ತ ಅವಧಿ ಬಡ್ಡಿ ದರ ಇಎಂಐ
ರೂ.30 ಲಕ್ಷ 32 ವರ್ಷ 7.25%*  Rs.20,116

30 ವರ್ಷಗಳಿಗೆ ರೂ. 20 ಲಕ್ಷದ ಹೋಮ್ ಲೋನ್ ಇಎಂಐ

ಲೋನ್ ಮೊತ್ತ ಅವಧಿ ಬಡ್ಡಿ ದರ ಇಎಂಐ
ರೂ.30 ಲಕ್ಷ 20 ವರ್ಷ 7.25%*  Rs.23,711

30 ವರ್ಷಗಳಿಗೆ ರೂ. 15 ಲಕ್ಷದ ಹೋಮ್ ಲೋನ್ ಇಎಂಐ

ಲೋನ್ ಮೊತ್ತ ಅವಧಿ ಬಡ್ಡಿ ದರ ಇಎಂಐ
ರೂ.30 ಲಕ್ಷ 15 ವರ್ಷ 7.25%* Rs.27,386

30 ವರ್ಷಗಳಿಗೆ ರೂ. 10 ಲಕ್ಷದ ಹೋಮ್ ಲೋನ್ ಇಎಂಐ

ಲೋನ್ ಮೊತ್ತ ಅವಧಿ ಬಡ್ಡಿ ದರ ಇಎಂಐ
ರೂ.30 ಲಕ್ಷ 10 ವರ್ಷ 7.25%* Rs.35,220

*ಮೇಲೆ ತಿಳಿಸಲಾದ EMI ಮೌಲ್ಯಗಳು ಸೂಚನಾತ್ಮಕವಾಗಿವೆ ಮತ್ತು ಅನ್ವಯವಾಗುವ ಬಡ್ಡಿ ದರ ಮತ್ತು ಲೋನ್ ನಿಯಮಗಳ ಆಧಾರದ ಮೇಲೆ ಬದಲಾಗಬಹುದು.

ಹಕ್ಕು ನಿರಾಕರಣೆ: ಮೇಲೆ ಒದಗಿಸಲಾದ ಬಡ್ಡಿ ದರ ಮತ್ತು EMI ಲೆಕ್ಕಾಚಾರಗಳು ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಆಗಿವೆ. ಅರ್ಜಿದಾರರ ಅರ್ಹತೆ, ಹಣಕಾಸಿನ ಪ್ರೊಫೈಲ್ ಮತ್ತು ಲೋನ್ ಅವಶ್ಯಕತೆಗಳನ್ನು ಅವಲಂಬಿಸಿ ನಿಜವಾದ ಲೋನ್ ನಿಯಮಗಳು, ಅನ್ವಯವಾಗುವ ಬಡ್ಡಿ ದರಗಳು ಮತ್ತು EMI ಮೊತ್ತಗಳು ಬದಲಾಗಬಹುದು.

₹30 ಲಕ್ಷದವರೆಗಿನ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಹಂತಗಳು

ಆನ್‌ಲೈನ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡುವುದು ತೊಂದರೆ ರಹಿತ ಪ್ರಕ್ರಿಯೆಯಾಗಿದೆ. ಪ್ರಾರಂಭಿಸಲು ಈ ಸರಳ ಹಂತಗಳನ್ನು ಅನುಸರಿಸಿ:

  1. ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್‌ಗೆ ಭೇಟಿ ನೀಡಿ.
  2. ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಸೇರಿದಂತೆ ನಿಮ್ಮ ಪ್ರಮುಖ ವಿವರಗಳನ್ನು ಭರ್ತಿ ಮಾಡಿ.
  3. ನಿಮ್ಮ ಉದ್ಯೋಗ ಮತ್ತು ಲೋನ್ ಪ್ರಕಾರವನ್ನು ಆಯ್ಕೆಮಾಡಿ, ನಂತರ ನಿಮ್ಮ ಪಿನ್‌‌ಕೋಡ್, ಅಪೇಕ್ಷಿತ ಲೋನ್ ಮೊತ್ತ ಮತ್ತು ನಿವ್ವಳ ಮಾಸಿಕ ಆದಾಯವನ್ನು ನಮೂದಿಸಿ.
  4. ನಿಮಗೆ ಕಳುಹಿಸಲಾದ OTP ಬಳಸಿ ನಿಮ್ಮ ಮೊಬೈಲ್ ನಂಬರ್ ಪರಿಶೀಲಿಸಿ.
  5. ನಿಮ್ಮ ಉದ್ಯೋಗ ಮತ್ತು ಲೋನ್ ವರ್ಗದ ಆಧಾರದ ಮೇಲೆ ನಿಮ್ಮ PAN, ಅಸ್ತಿತ್ವದಲ್ಲಿರುವ ಹಣಕಾಸಿನ ಜವಾಬ್ದಾರಿಗಳು ಮತ್ತು ಇತರ ಅಗತ್ಯ ವಿವರಗಳನ್ನು ಒದಗಿಸಿ.
  6. ನಿಮ್ಮ ಅಪ್ಲಿಕೇಶನ್ ಪೂರ್ಣಗೊಳಿಸಲು 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ.

ಒಮ್ಮೆ ನಿಮ್ಮ ಅಪ್ಲಿಕೇಶನ್ ಸಲ್ಲಿಸಿದ ನಂತರ, ಮುಂದಿನ ಹಂತಗಳಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಬಜಾಜ್ ಹೌಸಿಂಗ್ ಫೈನಾನ್ಸ್‌ನ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

₹.30 ಲಕ್ಷದ ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳು

ನೀವು ₹30 ಲಕ್ಷದ ಹೋಮ್ ಲೋನ್ ತೆಗೆದುಕೊಂಡಿದ್ದರೆ, ಆದಾಯ ತೆರಿಗೆ ಕಾಯ್ದೆ, 2025 ರ ಪ್ರಕಾರ ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಹಲವಾರು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಲು ನೀವು ಅರ್ಹರಾಗಬಹುದು:

1. ಬಡ್ಡಿ ಪಾವತಿಯಲ್ಲಿ ತೆರಿಗೆ ಪ್ರಯೋಜನ - ಸೆಕ್ಷನ್ 22

ಆಸ್ತಿಯನ್ನು ಸ್ವಯಂ ಸ್ವಾಧೀನಪಡಿಸಿಕೊಂಡಿದ್ದರೆ, ನಿಮ್ಮ ಹೋಮ್ ಲೋನ್‌ಗೆ ಪಾವತಿಸಿದ ಬಡ್ಡಿಯ ಮೇಲೆ ನೀವು ಹಣಕಾಸು ವರ್ಷದಲ್ಲಿ ₹2 ಲಕ್ಷದವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ಬಾಡಿಗೆ ನೀಡಿದ ಆಸ್ತಿಯ ಸಂದರ್ಭದಲ್ಲಿ, ಪಾವತಿಸಿದ ಸಂಪೂರ್ಣ ಬಡ್ಡಿಯನ್ನು ಕಡಿತವಾಗಿ ಕ್ಲೈಮ್ ಮಾಡಬಹುದು, ಆದರೆ ಇತರ ಆದಾಯದ ಮೇಲಿನ ಸೆಟ್-ಆಫ್ ಅನ್ನು ವಾರ್ಷಿಕವಾಗಿ ₹2 ಲಕ್ಷಕ್ಕೆ ನಿರ್ಬಂಧಿಸಲಾಗಿದೆ.

2. ಅಸಲು ಮರುಪಾವತಿಯಲ್ಲಿ ತೆರಿಗೆ ಪ್ರಯೋಜನ - ಸೆಕ್ಷನ್ 123

ನಿಮ್ಮ ಹೋಮ್ ಲೋನ್ EMI ನ ಅಸಲು ಅಂಶವು ಸೆಕ್ಷನ್ 123 ಅಡಿಯಲ್ಲಿ ವರ್ಷಕ್ಕೆ ₹1.5 ಲಕ್ಷದವರೆಗಿನ ಕಡಿತಕ್ಕೆ ಅರ್ಹವಾಗಿರುತ್ತದೆ. ಈ ಒಟ್ಟಾರೆ ಮಿತಿಯು PPF, EPF, ELSS ಮತ್ತು ಲೈಫ್ ಇನ್ಶೂರೆನ್ಸ್ ಪ್ರೀಮಿಯಂಗಳಂತಹ ಇತರ ಅರ್ಹ ಹೂಡಿಕೆಗಳನ್ನು ಕೂಡಾ ಒಳಗೊಂಡಿದೆ. ಸ್ವಾಧೀನದ ದಿನಾಂಕದಿಂದ ಕನಿಷ್ಠ ಐದು ವರ್ಷಗಳವರೆಗೆ ಆಸ್ತಿಯನ್ನು ಉಳಿಸಿಕೊಂಡರೆ ಮಾತ್ರ ಪ್ರಯೋಜನವನ್ನು ಕ್ಲೈಮ್ ಮಾಡಬಹುದು.

3. ಮೊದಲ ಬಾರಿಯ ಮನೆ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ಪ್ರಯೋಜನ - ಸೆಕ್ಷನ್ 131

ಸೆಕ್ಷನ್ 131 ಅಡಿಯಲ್ಲಿ, ಮೊದಲ ಬಾರಿಯ ಮನೆ ಖರೀದಿದಾರರು ತಮ್ಮ ಹೋಮ್ ಲೋನ್‌ಗೆ ಪಾವತಿಸಿದ ಬಡ್ಡಿಯ ಮೇಲೆ ಸೆಕ್ಷನ್ 22 ಮತ್ತು 123 ಅಡಿಯಲ್ಲಿ ಲಭ್ಯವಿರುವ ಕಡಿತಗಳ ಮೇಲೆ ಹೆಚ್ಚುವರಿಯಾಗಿ ₹1.5 ಲಕ್ಷದವರೆಗೆ ಕಡಿತವನ್ನು ಕ್ಲೈಮ್ ಮಾಡಬಹುದು. ಈ ಪ್ರಯೋಜನವನ್ನು ಪಡೆಯಲು, ಲೋನ್ ಮಂಜೂರಾತಿಯ ಸಮಯದಲ್ಲಿ ಅರ್ಜಿದಾರರು ಯಾವುದೇ ವಸತಿ ಆಸ್ತಿಯನ್ನು ಹೊಂದಿರಬಾರದು, ಆಸ್ತಿಯ ಸ್ಟ್ಯಾಂಪ್ ಡ್ಯೂಟಿ ಮೌಲ್ಯವು ₹45 ಲಕ್ಷಕ್ಕಿಂತ ಹೆಚ್ಚಿರಬಾರದು ಮತ್ತು ಹೋಮ್ ಲೋನ್ ಅನ್ನು ಮಾನ್ಯತೆ ಪಡೆದ ಹಣಕಾಸು ಸಂಸ್ಥೆ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಯು 1 ಏಪ್ರಿಲ್ 2019 ಮತ್ತು 31 ಮಾರ್ಚ್ 2022 ರ ನಡುವೆ ಮಂಜೂರು ಮಾಡಿರಬೇಕು. ಹೆಚ್ಚುವರಿಯಾಗಿ, ತೆರಿಗೆದಾರರು ಅದೇ ಆಸ್ತಿಗೆ ಸೆಕ್ಷನ್ 130 ಅಡಿಯಲ್ಲಿ ಪ್ರಯೋಜನಗಳನ್ನು ಕ್ಲೈಮ್ ಮಾಡಬಾರದು.

4. ಜಂಟಿ ಹೋಮ್ ಲೋನ್‌ಗಳ ಮೇಲೆ ತೆರಿಗೆ ಪ್ರಯೋಜನಗಳು

ಜಂಟಿ ಹೋಮ್ ಲೋನ್ ಸಂದರ್ಭದಲ್ಲಿ, ಪ್ರತಿ ಸಹ-ಸಾಲಗಾರರು ಆಸ್ತಿಯ ಸಹ-ಮಾಲೀಕರಾಗಿದ್ದರೆ ಮತ್ತು EMI ಮರುಪಾವತಿಗೆ ಕೊಡುಗೆ ನೀಡುತ್ತಿದ್ದರೆ, ಅಸಲು ಮರುಪಾವತಿ ಮತ್ತು ಬಡ್ಡಿ ಪಾವತಿ ಎರಡರ ಮೇಲೆಯೂ ಪ್ರತ್ಯೇಕವಾಗಿ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಬಹುದು. ಪ್ರತಿ ಸಾಲಗಾರರು ಸೆಕ್ಷನ್ 123 ಅಡಿಯಲ್ಲಿ ₹1.5 ಲಕ್ಷದವರೆಗೆ ಮತ್ತು ಸೆಕ್ಷನ್ 22 ಅಡಿಯಲ್ಲಿ ₹2 ಲಕ್ಷದವರೆಗೆ ಕ್ಲೈಮ್ ಮಾಡಬಹುದು.

ಹೋಮ್ ಲೋನ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸಲು ಸಲಹೆಗಳು

ಹೋಮ್ ಲೋನ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸಲು, 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸಿ ಮತ್ತು ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಕ್ಲಿಯರ್ ಮಾಡಿ. ಸಹ-ಅರ್ಜಿದಾರರೊಂದಿಗೆ ಜಂಟಿಯಾಗಿ ಅಪ್ಲೈ ಮಾಡುವುದು ನಿಮ್ಮ ಅರ್ಹತೆಯನ್ನು ಹೆಚ್ಚಿಸಬಹುದು. ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಹೆಚ್ಚಿಸಲು— ಬಾಡಿಗೆ ಅಥವಾ ಬೋನಸ್‌ಗಳಂತಹ— ಎಲ್ಲಾ ದಾಖಲಿಸಿದ ಆದಾಯ ಮೂಲಗಳನ್ನು ಸೇರಿಸಿ. ನಿಮ್ಮ ಪ್ರಸ್ತುತ ಅರ್ಹತೆಯನ್ನು ಅಂದಾಜು ಮಾಡಲು, ನೀವು ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.

ಆಗಾಗ್ಗೆ ಕೇಳುವ ಪ್ರಶ್ನೆಗಳು

₹30 ಲಕ್ಷದ ಹೋಮ್ ಲೋನ್‌ಗೆ ಅಪ್ಲೈ ಮಾಡಲು, ಸ್ವಯಂ ಉದ್ಯೋಗಿ ಅರ್ಜಿದಾರರು 25 ಮತ್ತು 70 ವರ್ಷ ವಯಸ್ಸಿನ** ನಡುವಿನ ಭಾರತೀಯ ನಿವಾಸಿಗಳಾಗಿರಬೇಕು**. ಅವರು ತಮ್ಮ ಪ್ರಸ್ತುತ ಬಿಸಿನೆಸ್‌ನಲ್ಲಿ ಕನಿಷ್ಠ 3 ವರ್ಷಗಳ ಮುಂದುವರಿಕೆಯನ್ನು ಹೊಂದಿರಬೇಕು.

NRI ಗಳನ್ನು ಒಳಗೊಂಡಂತೆ, ಸಂಬಳ ಪಡೆಯುವ ಅರ್ಜಿದಾರರು 23 ಮತ್ತು 67 ವರ್ಷಗಳ** ನಡುವಿನ ಭಾರತೀಯ ನಾಗರಿಕರಾಗಿರಬೇಕು**. ಅವರು ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.

ಅರ್ಜಿದಾರರು PAN ಕಾರ್ಡ್ ಅಥವಾ ಫಾರ್ಮ್ 60 (ಕಡ್ಡಾಯ), ಮಾನ್ಯ ಗುರುತಿನ ಮತ್ತು ವಿಳಾಸದ ಪುರಾವೆಗಳು, ಪಾಸ್‌ಪೋರ್ಟ್ ಸೈಜ್ ಫೋಟೋಗಳು, ಸಂಬಳದ ಸ್ಲಿಪ್‌/ಫಾರ್ಮ್ 16 ಅಥವಾ ITR ಸ್ಟೇಟ್ಮೆಂಟ್‌ಗಳಂತಹ ಆದಾಯ ಡಾಕ್ಯುಮೆಂಟ್‌ಗಳು, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಾಗಿದ್ದರೆ ಬಿಸಿನೆಸ್ ಪುರಾವೆಯನ್ನು ಸಲ್ಲಿಸಬೇಕು.

ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೋರಬಹುದು.

ಹೌದು, ನೀವು ನಮ್ಮೊಂದಿಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಮಾಡಬಹುದು ಮತ್ತು ಸ್ಪರ್ಧಾತ್ಮಕ ಬಡ್ಡಿ ದರವನ್ನು ಪಡೆಯುವ ಅವಕಾಶವನ್ನು ಪಡೆಯಬಹುದು.

ಹೌದು, ಸಂಬಳ ಪಡೆಯುವ NRI ಗಳು ₹30 ಲಕ್ಷದ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು.

ಪೂರ್ವ-ಅರ್ಹ ಆಫರ್

ಪೂರ್ತಿ ಹೆಸರು*

ಫೋನ್ ನಂಬರ್*

ಒಟಿಪಿ*

ಜನರೇಟ್ ಮಾಡಿ
ಈಗ ಪರಿಶೀಲಿಸಿ
Online Home Loan
ಆನ್‌ಲೈನ್ ಹೋಮ್ ಲೋನ್

ತ್ವರಿತ ಹೋಮ್ ಲೋನ್ ಅನುಮೋದನೆ

ರೂ. 1,999 + ಜಿಎಸ್‌ಟಿ*

ರೂ. 5,999 + ಜಿಎಸ್‌ಟಿ
*ರಿಫಂಡ್ ಮಾಡಲಾಗುವುದಿಲ್ಲ